ಕೊನೆಗೂ ಸೆರೆಯಾದ ಮೊಸಳೆ..!

bkt-8-9
ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಮೊಸಳೆ ಸೆರೆ ಸಿಕ್ಕಿರುವುದು.
Published on

ಬಾಗಲಕೋಟೆ: ಕಳೆದ ನಾಲ್ಕು ದಿನಗಳ ಹಿಂದೆ ಮುರನಾಳ ಪುನರ್ ವಸತಿ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ಶನಿವಾರ ಸೆರೆ ಸಿಕ್ಕಿದೆ.
ಕೆರೆಯಲ್ಲಿ ಮೊಸಳೆ ಕಂಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ಸಾರ್ವಜನಿಕರು ನೀರು ತರಲು ಕೆರೆಗೆ ತೆರಳುವುದು ನಿಷೇಧಿಸಲಾಗಿತ್ತು. ಶುಕ್ರವಾರದಿಂದ ಅರಣ್ಯ ಇಲಾಖೆ, ಸ್ಥಳೀಯ ಮೀನುಗಾರರ ನೆರವಿನಿಂದ ಕಾರ್ಯಾಚರಣೆ ನಡೆಸಿತ್ತು. ಶನಿವಾರ ಕೆರೆಯಲ್ಲಿ ತೆಪ್ಪದ ಮೂಲಕ ತೆರಳಿ ಮೊಸಳೆ ಹಿಡಿಯುವಲ್ಲಿ ಮೀನುಗಾರರು ಯಶಸ್ವಿಯಾಗಿದ್ದಾರೆ. ಮೊಸಳೆಯನ್ನು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಿಡಲಾಗಿದೆ. ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net