

ನಾಪೋಕ್ಲು: ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ 11ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಪೊನ್ನಚನ ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಎರಡು ವರ್ಷಗಳಿಗೊಮ್ಮೆ ಆಡಳಿತ ಮಂಡಳಿ ಚುನಾವಣೆ ನಡೆಸಿ ನೂತನ ಮಂಡಳಿಯನ್ನು ರಚಿಸಲಾಗುತ್ತಿದೆ. ಸಂಘದಲ್ಲಿ ಕೊಡಗಿನ ಸಂಪ್ರದಾಯದ ಹಬ್ಬ ಆಚರಣೆ, ಕ್ರೀಡಾಕೂಟಗಳನ್ನು ಆಯೋಜಿಸಿಕೊಂಡು ಪರಸ್ಪರ ಸಹಬಾಳ್ವೆ ಹಾಗೂ ಸಮಾನತೆ ಆರೋಗ್ಯಕರ ಚಟುವಟಿಕೆಯಿಂದ ಕೊಡಗು ಕ್ಷೇಮಾಭಿವೃದ್ಧಿ ಸಂಘ ಹೂಟಗಳ್ಳಿ ಕೊಡಗು ಮೈಸೂರು ಭಾಗದಲ್ಲಿ ಗುರುತಿಸಿಕೊಂಡಿದೆ ಎಂದರು.
ಮಹಾಸಭೆಯಲ್ಲಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕಿದ್ದು ನೂತನ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷರಾಗಿದ್ದ ಪೊನ್ನಚನ ಅಪ್ಪಯ್ಯ ಹಾಗೂ ಅವರ ತಂಡದವರು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪೊನ್ನಚ್ಚನ ಅಪ್ಪಯ್ಯ, ಉಪಾಧ್ಯಕ್ಷ ಚೆರುಕನ ಲವ, ಗೌರವ ಕಾರ್ಯದರ್ಶಿ ಮುಕ್ಕಾಟಿ ಅರುಣಕುಮಾರ್, ಸಹ ಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಜಾಂಚಿ ಎಡಿಕೇರಿ ಪೂಣಚ್ಚ ನಿರ್ದೇಶಕರಾಗಿ ಕರ್ಣಯ್ಯನ ನೀಲಾಕ್ಷಿ ಮೋಹನ್, ಚಿಕ್ಕೋಡಿ ಪುಷ್ಪಾ, ರೇಖಾ ರಮೇಶ್, ನೆಕ್ಕಿಲ ಮಾದವ, ಉದಿಯನ ಸುರೇಶ್, ಚೆರುಕನ ಕುಶ, ಚೀಯಪ್ಪನ ರಾಜೇಶ್, ಸೂರ್ತಲೆ ಹರೀಶ್, ಮುಕ್ಕಾಟಿ ತಿಲಕಾ ನಂದ, ಸಲಹಾ ಸೂಚಕರಾಗಿ ಸಂಘದ ಮಾಜಿ ಅಧ್ಯಕ್ಷರಾದ ಚೆಟ್ಟಿಮಾಡ ಜನಾರ್ದನ ಮತ್ತು ನಡುಮನೆ ಚಂಗಪ್ಪ ಅವರನ್ನು ಆಯ್ಕೆಮಾಡಲಾಯಿತು.
ಮುಂದಿನ ಎರಡು ವರ್ಷದ ಅವಧಿಗೆ ಈ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಲಿದೆ ಎಂದು ಕಾರ್ಯದರ್ಶಿ ಮುಕ್ಕಾಟಿ ಅರುಣ ಅವರು ಸಭೆಯಲ್ಲಿ ಪ್ರಕಟಿಸಿದರು.