ಕೊಂಡೆನಾಳು ಗೇಟ್ ಬಳಿ ಮೇಕೆಗಳ ಕಳವು

Published on

ಗಂಡಸಿ: ಗಂಡಸಿ ಹ್ಯಾಂಡ್ ಪೋಸ್ಟ್ -ತಿಪಟೂರು ರಸ್ತೆಯ ಕೊಂಡೆನಾಳು ಗೇಟ್ ಬಳಿಯ ತೋಟದ ಮನೆಯಲ್ಲಿ ಬುಧವಾರ ರಾತ್ರಿ ಖದೀಮರು 6 ಮೇಕೆಗಳನ್ನು ಹೊತ್ತೊಯ್ದಿದ್ದಾರೆ.

ಕೊಂಡೆನಾಳು ತೋಟದ ಮನೆಯ ನಾಗರಾಜು ಮೇಕೆ ಸಾಕಣೆ ಮಾಡುತ್ತಿದ್ದರು. ಪ್ರತಿ ದಿನದಂತೆ ಮೇಕೆಗಳನ್ನು ಮೇಯಿಸಿಕೊಂಡು ಬುಧವಾರ ಸಂಜೆ 6 ಗಂಟೆಯಲ್ಲಿ ತಮ್ಮ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಗುರುವಾರ ಬೆಳಗ್ಗೆ ಮೇಕೆಗಳನ್ನು ಹೊರಗೆ ಕಟ್ಟಲು ಹೋದಾಗ ಖದೀಮರು ಬೀಗ ಒಡೆದು 7 ಚಿಕ್ಕ ಮೇಕೆಗಳನ್ನು ಬಿಟ್ಟು 6 ದೊಡ್ಡ ಮೇಕೆಗಳನ್ನು ಕಳವು ಮಾಡಿರುವುದು ತಿಳಿದು ಬಂದಿದೆ. ಗಂಡಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net