ಕೇರಳಿಗರಿಂದ ಓಣಂ ಹಬ್ಬ ಆಚರಣೆ

05-SEP-GPT-1
Published on

ಗುಂಡ್ಲುಪೇಟೆ: ಪಟ್ಟಣ ಹಾಗೂ ತಾಲೂಕಿನಲ್ಲಿ ನೆಲೆಸಿರುವ ಕೇರಳಿಗರು ಶುಕ್ರವಾರ ತಮ್ಮ ಮನೆಗಳಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕೇರಳದ ರಾಜನಾಗಿದ್ದ ಮಹಾಬಲಿಯು ವರ್ಷಕ್ಕೊಮ್ಮೆ ಭೂಮಿಗೆ ಬರುತ್ತಾನೆ ಎಂಬ ನಂಬಿಕೆಯಿಂದ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಕೇರಳದಲ್ಲಿ ಹತ್ತು ದಿನಗಳ ಕಾಲ ನಡೆಯುವ ಹಬ್ಬದ ಕೊನೆಯ ದಿನವಾದ ಶುಕ್ರವಾರ ತಾಲೂಕಿನಲ್ಲಿ ನೆಲೆಸಿರುವ ಮಲೆಯಾಳಿಗಳು ಆಚರಿಸಿ ಸಂಭ್ರಮಿಸಿದರು.

ಶುಕ್ರವಾರ ಮುಂಜಾನೆ ಶುಭ್ರವಸ್ತ್ರ ಧರಿಸಿದ ಮಹಿಳೆಯರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಸಲುವಾಗಿ ತಮ್ಮ ಮನೆಗಳಲ್ಲಿ ನಾನಾ ವರ್ಣದ ಹೂವುಗಳಿಂದ ಪುಷ್ಪ ರಂಗೋಲಿ ಬಿಡಿಸಿ ನಡುವೆ ಪುಷ್ಪದಿಂದ ಅಲಂಕರಿಸಿದ ದೀಪ ಹಚ್ಚಿದರೆ, ಶ್ವೇತ ವಸ್ತ್ರಧಾರಿಗಳಾದ ಪುರುಷರು ಹಾಗೂ ಕುಟುಂಬದವರು ತಮ್ಮ ಬಂಧು ಬಾಂಧವರನ್ನು ಮನೆಗೆ ಕರೆದು ಹಬ್ಬ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net