

ಕುಶಾಲನಗರ: ಇಲ್ಲಿನ ಮಾದಪಟ್ಟಣ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ 7ಜನರನ್ನು ಕುಶಾಲನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಕೇರಳ ರಾಜ್ಯದ ವೈನಾಡಿನ ಶಾಫಿ (25), ಅಬ್ದುಲ್ ರೆಹಮಾನ್ (33), ಅಬ್ದುಲ್ ಲತೀಫ್ (40), ವಿಷ್ಣು(23), ಕುಂಇ ಮೊಹಮ್ಮದ್ (43) ಜಿನೇಶ್ (41) ಮಹೇಶ್ (20) ಅವರನ್ನು ಬಂಧಿಸಿದ್ದಾರೆ. 76 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಸಿಪಿಐ ಯಶವಂತ, ಚಂದ್ರಶೇಖರ್, ಎಚ್.ವಿ.ಗೀತಾ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎಸ್ಪಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.