ಕೇರಳ ಸಮಾಜದಿಂದ ಪಿತೃದರ್ಪಣ

kerala samaja.
ಎನ್.ಆರ್.ಪುರ ತಾಲೂಕು ಕೇರಳ ಹಿಂದು ಸಮಾಜದಿಂದ ರಾವೂರು ಭದ್ರಾ ಹಿನ್ನೀರಿನ ತಟದಲ್ಲಿ ಪಿತೃದರ್ಪಣ ಅರ್ಪಿಸಲಾಯಿತು.
Published on

ಎನ್.ಆರ್.ಪುರ: ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ತಾಲೂಕು ಕೇರಳ ಹಿಂದು ಸಮಾಜದಿಂದ ಪಿತೃದರ್ಪಣ ಕಾರ್ಯವನ್ನು ಸಮಾಜದ ಎಲ್ಲಾ ಬಾಂಧವರು ಸೇರಿ ಹಿರಿಯರ ಪೂಜೆ ನಡೆಸಿದರು.

ಸುಮಾರು 69 ಕುಟುಂಬದವರು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮವನ್ನು ಸಮಾಜದ ಗುರುಗಳಾದ ಬಾಹು ಟಿ.ಸುಂದರ್‌ರಾಜ್ ನೆರವೇರಿಸಿದರು. ಸುಮಾರು 150 ಜನ ಪಿತೃದರ್ಪಣ ಮಾಡಿದರು. ಸಮಾಜದ ಅಧ್ಯಕ್ಷ ಪಿ.ಆರ್.ಸುಕುಮಾರ್, ಉಪಾಧ್ಯಕ್ಷ ಗಂಗಾಧರ್ ಆಚಾರ್, ಸಹ ಕಾರ್ಯದರ್ಶಿ ಕೆ.ಕೆ.ಸಜಿ, ಮುರುಳೀಧರ, ಭಾರತಿ ಅರವಿಂದಾಚಾರ್, ಸಚಿನ್ ಅರವಿಂದಾಚಾರ್, ಅಶೋಕ ವಗ್ಗಡೆ ಸಾಜು ಹಾಗೂ ಸಮಾಜದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net