

ಬಾಗಲಕೋಟೆ: ಕೇಂದ್ರ ಸರ್ಕಾರದ ಮೇಲೆ ಜನರು ಇಟ್ಟಿರುವ ಭರವಸೆ, ನಿರೀಕ್ಷೆ ಹುಸಿಗೊಂಡಿದೆ. ಕೃಷಿ, ಶಿಕ್ಷಣ ಕ್ಷೆತ್ರ, ಉದ್ಯೋಗ ಸೃಷ್ಟಿಗೆ ಬಜೆಟ್ ಶೂನ್ಯ ಕೊಡುಗೆ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆ , ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಬಗ್ಗೆ ತಾರ್ಕಿಕ್ ವಾಗಿ ತೆಗೆದುಕೊಂಡುವ ಕುರಿತು ಪ್ರಸ್ತಾಪ ಮಾಡಿಲ್ಲ. ನದಿ ಜೋಡನೆ ಕನಸು ಹುಸಿಗೊಂಡಿದೆ. ವಿಕಸಿತ ಭಾರತ ಅಂತ ಪ್ರಸ್ತಾಪಿಸಿ ಪ್ರಜೆಗಳಿಗೆ ನಕ್ಷತ್ರ ತೋರಿಸಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.