ಕೇಂದ್ರ ಕಾಂಗ್ರೆಸ್‌ನಿಂದ ಐದು ನ್ಯಾಯ ಗ್ಯಾರಂಟಿ

bkt-22-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ರೇಣುಕಾ ನ್ಯಾಮಗೌಡರ, ಜಯಶ್ರೀ ಗುಳಾಬಾಳ, ಅನ್ನಪೂರ್ಣ ಗೂಗಿಹಾಳ, ಸಾವಿತ್ರಿ ಗಾಜಿ ಇತರರು ಇದ್ದರು.
Published on

ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎಐಸಿಸಿ ಐದು ನ್ಯಾಯ ಗ್ಯಾರಂಟಿ ಘೋಷಣೆ ಮಾಡಿದ್ದು, ಮಹಿಳಾ ಸಬಲೀಕರಣ ಹಾಗೂ ಶ್ರಮ ಜೀವಿಗಳ ಬಲ ತುಂಬುವ ಪ್ರಣಾಳಿಕ ನೀಡಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಅಽಕಾರಕ್ಕೆ ಬಂದ ತಕ್ಷಣ ಗ್ಯಾರಂಟಿಗಳ ಅನುಷ್ಠಾನಕ್ಕೆ ೫೦ ಸಾವಿರ ಕೋಟಿ ರೂ. ಅಽಕ ಖರ್ಚು ಮಾಡಿದೆ. ಬಾಗಲಕೋಟೆ ಜಿಲ್ಲೆಗೂ ಇದರ ಲಾಭ ಸಿಕ್ಕಿದೆ. ಇದೇ ಮಾದರಿಯಲ್ಲಿ ಕೇಂದ್ರ ಕಾಂಗ್ರೆಸ್ ಗ್ಯಾರಂಟಿಗಳನ್ನು ರಾಷ್ಟ್ರ ವ್ಯಾಪಿ ವಿಸ್ತರಿಸಲು ಮುಂದಾಗಿದೆ. ಇದಕ್ಕೆ ಮತದಾರರು ಬೆಂಬಲ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರನ್ನು ಆಯ್ಕೆ ಮಾಡಬೇಕು ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಽನಾಯಕ ರಾಹುಲ್ ಗಾಂಽ ಮಹಾಲಕ್ಷಿ÷್ಮÃ ಗ್ಯಾರಂಟಿ ಅಡಿಯಲ್ಲಿ ಬಡ ಕುಟುಂಬದ ಓರ್ವ ಹೆಣ್ಣು ಮಗಳಿಗೆ ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುತ್ತದೆ. ಆದಿ ಕಾ ಆಬಾದಿ ಪೂರಾ ಹಕ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ನೇಮಕಾತಿಯಲ್ಲಿ ಶೇ.೫೦ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಶಕ್ತಿ ಸಮ್ಮಾನ ಯೋಜನೆ ಅಡಿಯಲ್ಲಿ ಅಂಗನವಾಡಿ, ಬಿಸಿಯೂಟ್, ಆಶಾ ಕಾರ್ಯಕರ್ತೆಯರಿಗೆ ದೇಶ ವ್ಯಾಪಿ ಸಂಬಳ ದುಪ್ಪಟ್ಟು ಮಾಡಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ ಮಹಿಳಾ ಪ್ರಧಾನಕ್ಕೆ ಅವಕಾಶ ನೀಡಲಾಗುತ್ತದೆ. ಉದ್ಯೋಗ ಮಾಡುವ ಮಹಿಳೆಯರಿಗಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ವಸತಿ ನಿಲಯ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಬದ್ಧತೆ ತೋರಿದ್ದಾರೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿ ನೀಡಲಾಗಿದೆ. ಕೋಟ್ಯಂತರ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಂಡಿz್ದÁರೆ. ಶಕ್ತಿ ಯೋಜನೆ ಬಹಳಷ್ಟು ಅನುಕೂಲ ಮಾಡಿz್ದÁರೆ. ಗೃಹ ಜ್ಯೋತಿ ಯೋಜನೆ ಅಡಿ ಬಾಗಲಕೋಟೆ ಜಿ¯್ಲೆಯ ೪೧೬೦೯ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. ಗೃಹ ಲಕ್ಷಿ÷್ಮÃ ಯೋಜನೆ ಅಡಿಯಲ್ಲಿ ೪೮೪೪೦ ಕುಟುಂಬಗಳಿಗೆ ಪ್ರತಿ ತಿಂಗಳು ೨ ಸಾವಿರ ಲಾಭ ಪಡೆಯುತ್ತಿz್ದÁರೆ. ಯುವ ಯೋಜನೆ ಅಡಿಯಲ್ಲಿ ೭೦೦ ಹೆಚ್ಚು ಜನ ಪ್ರಯೋಜನ ಪಡೆಯುತ್ತಿz್ದÁರೆ. ಒಟ್ಟಾರೆ ಕಾಂಗ್ರೆಸ್ ಅಂದರೇ ಗ್ಯಾರಂಟಿ, ಬದ್ಧತೆಯ ಸರ್ಕಾರ ಎಂದು ಹೇಳಿದರು.
ಮುಖಂಡರಾದ ರೇಣುಕಾ ನ್ಯಾಮಗೌಡರ, ಜಯಶ್ರೀ ಗುಳಾಬಾಳ, ಅನ್ನಪೂರ್ಣ ಗೂಗಿಹಾಳ, ಸಾವಿತ್ರಿ ಗಾಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net