ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Untitled
Published on

ವಿಜಯವಾಣಿ ಸುದ್ದಿಜಾಲ ಶಿರಸಿ:
ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು ಕಂಡ ಘಟನೆ ನಗರದ ಹೊರವಲಯದಲ್ಲಿರುವ ಎಸಳೆ ಕೆರೆಯಲ್ಲಿ ಶನಿವಾರ ನಡೆದಿದೆ.ಸಮೀಪದ ಕಸ್ತೂರಬಾ ನಗರದ ಅಹ್ಮದ್ ರಾಜಾಕ್ ಜನ್ನಿಗೇರಿ (14), ಇಮಾಮ್ ಖಾಸಿಮ್ ರಿಯಾಜ್ ಪಾಳಾ (14) ಮೃತ ಬಾಲಕರಾಗಿದ್ದಾರೆ. ಇವರು ಕಸ್ತೂರಬಾನಗರದ ಶಾಲೆಯಲ್ಲಿ ಓದುತ್ತಿದ್ದರು. ಶಾಲೆ ಬಿಟ್ಟ ನಂತರ ನಾಲ್ಕು ಜನ ಸ್ನೇಹಿತರು ಆಟವಾಡಲು ಕೆರೆಯ ಬಳಿ ತೆರಳಿದ್ದಾಗ ಇಬ್ಬರು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಅಗ್ನಿಶಾಮಕ ದಳದವರು ಹಾಗೂ ಪೊಲೀಸ್ ಸಿಬ್ಬಂದಿ ಶವವನ್ನು ಮೇಲೆತ್ತಿದ್ದಾರೆ.ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net