

ರಟ್ಟಿಹಳ್ಳಿ: ತಾಲೂಕಿನ ನೇಸ್ವಿ ಗ್ರಾಮದ ರೈತನೋರ್ವ ಬೆಳೆ ಹಾನಿ ಮತ್ತು ಸಾಲಬಾಧೆಯಿಂದ ಬೇಸತ್ತು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜರುಗಿದೆ. ವೀರಭದ್ರಪ್ಪ ಕರಬಸಪ್ಪ ಗುಬ್ಬೇರ (65) ಮೃತ ರೈತ. ಈತ 2.5 ಎಕರೆ ಜಮೀನು ಹೊಂದಿದ್ದು, ಕೃಷಿ ಚಟುವಟಿಕೆಗಳಿಗಾಗಿ ನೇಸ್ವಿ ಗ್ರಾಮದ ಕೆ.ವಿ.ಜೆ. ಬ್ಯಾಂಕ್ನಲ್ಲಿ 2 ಲಕ್ಷ 15 ಸಾವಿರ ರೂ. ಮತ್ತು ಕೈಗಡವಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದನು. ಜಮೀನಿನಲ್ಲಿ ಬೆಳೆಯಲಾದ ಬಾಳೆ ಬೆಳೆಯು ಇತ್ತೀಚೆಗೆ ಮಳೆ ಗಾಳಿಯಿಂದಾಗಿ ಹಾನಿಯಾಗಿತ್ತು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಗ ಬಸವರಾಜ ಗುಬ್ಬೇರ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.
ನೇಸ್ವಿ ಗ್ರಾಮದ ಹೊರವಲಯದಲ್ಲಿರುವ ವಿಸ್ತಾರವಾದ ಕೆರೆಯಲ್ಲಿ ರೈತ ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದ. ಶವವನ್ನು ಮಂಗಳವಾರ ಸಂಜೆಯವರೆಗೆ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿ ಬೆ. 10 ಗಂಟೆಗೆ ಶವ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.