ಕೆರೆ-ಕಟ್ಟೆಗಳು ಗ್ರಾಮದ ಸಂಪತ್ತು

1000385624
Published on

ಮೂಗೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಹಳೆಯ ಕೆರೆಯನ್ನು ಪುನಶ್ಚೇತನಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶಕುಂತಲಾ ಹೇಳಿದರು.

ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕೆರೆ ಅಭಿವೃದ್ಧಿ ಸಮಿತಿ ರಚನೆ ಹಾಗೂ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು. ಕೆರೆ-ಕಟ್ಟೆಗಳು ಗ್ರಾಮದ ಸಂಪತ್ತು. ಅವುಗಳಿಗೆ ಕಾಯಕಲ್ಪ ನೀಡಲು ಸಂಸ್ಥೆ ಮುಂದಾಗಿದೆ. ತಾಲೂಕಿನಾದ್ಯಂತ ಸುಮಾರು 100 ಕೆರೆಗಳಿಗೆ ಪುನಶ್ಚೇತನ ನೀಡಲು ಮುಂದಾಗಿದ್ದೇವೆ. ನಮ್ಮೂರು ನನ್ನ ಕೆರೆ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಇದರಲ್ಲಿ ಜನರ ಪಾಲು ಇರಬೇಕು. ಕೆರೆಗಳು ಒಬ್ಬ ವ್ಯಕ್ತಿಗೆ ಸೇರದೆ ಸಮಾಜಕ್ಕೆ ಸೇರಬೇಕು ಎಂಬುದು ಆಶಯವಾಗಿದೆ. ಎಲ್ಲರೂ ಕೈಜೋಡಿಸಿ ಕೆರೆ ಅಭಿವೃದ್ಧಿ ಯೋಜನೆ ಫಲಪ್ರದವಾಗಲು ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಪಿ.ಶಿವರುದ್ರಸ್ವಾಮಿ, ಉಪಾಧ್ಯಕ್ಷ ಎಂ.ಎಂ.ಬಸವಣ್ಣ, ಸಂಸ್ಥೆಯ ಕೃಷಿ ಅಧಿಕಾರಿ ಶಿವಶಂಕರ್, ವಲಯಾಧಿಕಾರಿ ಕುಮಾರಿ, ಚಂದ್ರಮ್ಮ, ಸತೀಶ್, ಎಂ.ಎಂ.ಮಹದೇವಸ್ವಾಮಿ, ರೇಣುಕಾ ಪ್ರಸಾದ್, ಪ್ರಕಾಶ್, ಚಿದಂಬರ ಮೂರ್ತಿ, ನಟರಾಜು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net