

ಕೆ.ಆರ್.ಸಾಗರ: ಕೆ.ಆರ್.ಎಸ್. ಜಲಾಶಯದಿಂದ ಅಣೆಕಟ್ಟು ಮತ್ತು ನದಿ ಪಾತ್ರದ ನಾಲೆಗಳಿಗೆ ಮಂಗಳವಾರ ರಾತ್ರಿಯಿಂದ ನೀರು ಹರಿಸಲಾಗುತ್ತಿದೆ.
ಕೆರೆ-ಕಟ್ಟೆಗಳಿಗೆ, ಕುಡಿಯುವ ನೀರಿಗಾಗಿ ಹಾಗೂ ಸದ್ಯ ಬೆಳೆಗಳಿಗೆ ಮೊದಲು ನೀರು ಬಳಸಿಕೊಳ್ಳುವುದು ಆದ್ಯತೆಯಾಗಿದೆ ಎಂದು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಜಯಂತ ಮಾಹಿತಿ ನೀಡಿದ್ದಾರೆ. ಇನ್ನೂ ಹಲವೆಡೆ ನಾಲೆ ಕಾಮಗಾರಿ ನಡೆಯುತ್ತಿರುವ ಕಾರಣ ನಾಲೆಗಳಿಗೆ ಕಡಿಮೆ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಇದರಿಂದ ರೈತರು ಭತ್ತ ಅಗೆ ಹಾಕಲು ಇನ್ನು ಸ್ವಲ್ಪ ದಿನ ತಡವಾಗಬಹುದು ಎಂದು ತಿಳಿಸಿದ್ದಾರೆ.