ಕೆರೆ ಏರಿ ಉದ್ದಕ್ಕೂ ವಿದ್ಯುತ್ ದೀಪ ಅಳವಡಿಕೆ

Published on

ಹಿರೇಕೆರೂರ: ಇತಿಹಾಸ ಪ್ರಸಿದ್ಧ ಇಲ್ಲಿಯ ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೆರೆ ಏರಿ ಉದ್ದಕ್ಕೂ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ದುರ್ಗಾದೇವಿ ಕೆರೆ ಏರಿಯ ಮೇಲೆ ವಿದ್ಯುತ್ ದೀಪ ಅಳವಡಿಸಲು ಕಂಬ ಹಾಗೂ ತಂತಿ ಜೋಡಿಸುವ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ದುರ್ಗಾದೇವಿ ಜಾತ್ರೆ ಸಮೀಪಿಸುತ್ತಿದ್ದು, ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಾಯು ವಿಹಾರಿಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಈ ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಸಲಾಗುತ್ತಿದೆ. ವಿದ್ಯುತ್ ದೀಪಗಳನ್ನು ಸುರಕ್ಷಿತವಾಗಿ ಅಳವಡಿಸುವುದರ ಜೊತೆಗೆ, ಕಿಡಗೇಡಿಗಳ ಕೃತ್ಯಕ್ಕೆ ಅವು ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ತಹಸೀಲ್ದಾರ್ ಕೆ.ಎ. ಉಮಾ, ಪಪಂ ಅಧ್ಯಕ್ಷ ಗುರುಶಾಂತಪ್ಪ ಎತ್ತಿನಹಳ್ಳಿ, ಉಪಾಧ್ಯಕ್ಷೆ ಸುಧಾ ಚಿಂದಿ, ಜಿಪಂ ಸದಸ್ಯ ಎನ್.ಎಂ. ಈಟೇರ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಗದೀಶ ತಂಬಾಕದ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಕಂಠಾಧರ ಅಂಗಡಿ, ಅಲ್ತಾಫ್​ಖಾನ್ ಪಠಾಣ್, ಹರೀಶ ಕಲಾಲ್, ಹನುಮಂತಪ್ಪ ಕುರುಬರ, ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಹೆಸ್ಕಾಂ ಎಇಇ ವಾಗೀಶ ಕಡತಿ, ರಾಜೀವ್ ಮರಿಗೌಡ್ರ ಇದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net