

ಚನ್ನರಾಯಪಟ್ಟಣ: ಪಟ್ಟಣ ದಿನೇದಿನೆ ವಿಸ್ತಾರವಾಗಿ ಬೆಳೆಯುತ್ತಿದ್ದು ಪುರಸಭೆಯ ಅನುಕೂಲಕ್ಕಾಗಿ ಇಲಾಖೆಯ ಮನವಿ ಮೇರೆಗೆ ಕೆನರಾ ಬ್ಯಾಂಕ್‌ನ ಸಿಎಸ್‌ಆರ್ ಅನುದಾನದಲ್ಲಿ ಬೊಲೇರೊ ವಾಹನವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪುರಸಭೆಗೆ ನೂತನ ಮಹಿಂದ್ರಾ ಬೊಲೇರೊ ಜೀಪನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಪುರಸಭೆಯ ಸ್ಥಳ ಪರಿಶೀಲನೆ ಹಾಗೂ ಇತರ ಕೆಲಸಗಳಿಗೆ ಬೇರೆ ವಾಹನಗಳನ್ನು ಆಶ್ರಯಿಸಿ ಅಧ್ಯಕ್ಷರು ಸೇರಿದಂತೆ ಪುರಸಭೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಪುರಸಭೆಯ ಸಂಪೂರ್ಣ ಹಣಕಾಸು ವಹಿವಾಟು ಕೆನರಾ ಬ್ಯಾಂಕಿನಲ್ಲಿ ನಡೆಯುತ್ತಿದ್ದು ಅಧ್ಯಕ್ಷರು ಹಾಗೂ ಅಧಿಕಾರಿಗಳ ಮನವಿ ಮೇರೆಗೆ ಬ್ಯಾಂಕಿನ ವ್ಯವಸ್ಥಾಪಕರು ಮುಖ್ಯ ಆಡಳಿತ ಕಚೇರಿಗೆ ಮನವಿ ಸಲ್ಲಿಸಿ ಅನುಮತಿ ಪಡೆದು 14 ಲಕ್ಷ ರೂ.ವೆಚ್ಚದ ನೂತನ ಬೊಲೇರೊ ಜೀಪನ್ನು ಪುರಸಭೆಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.
ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷೆ ರಾಣಿಕೃಷ್ಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಸ್.ಗಣೇಶ್, ಸದಸ್ಯ ರಾಮು, ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್ ಮರಗೂರು, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ನಿಖಿಲ್, ಸಚಿನ್, ಮುಖಂಡರಾದ ರಘು, ಶಾಮಿಯಾನ ರಮೇಶ್, ಕುಂಬಾರಹಳ್ಳಿ ಗಾರೆಕೃಷ್ಣ ಮತ್ತಿತರರಿದ್ದರು.