

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ೬ ದಶಕವಾದರು ಪೂರ್ಣಗೊಂಡಿಲ್ಲ ಎನ್ನುವುದು ಬೇಸರದ ಸಂಗತಿ. ನಮ್ಮ ಅಧಿಕಾರ ಅವಽಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇವೆ. ಈ ವಿಚಾರದಲ್ಲಿ ಚರ್ಚೆ ಬಂದರೇ ಕಾಂಗ್ರೆಸ್ ಬೆತ್ತಲೆಗೊಳಿಸುವೆ. ಭೂ ಸ್ವಾಧೀನಗೊಳ್ಳುವ ಭೂಮಿಗೆ ಒಣ ಬೇಸಾಯ ೩೦ ಲಕ್ಷ ರೂ. ನೀರಾವರಿಗೆ ೪೦ ಲಕ್ಷ ರೂ. ಪರಿಹಾರ ನೀಡಿದರೇ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರನ್ನು ಬಂಗಾರದ ಕೀರಿಟ್ ಹಾಕಿ ಸನ್ಮಾನಿಸುವೆ ಎಂದು ಜಲ ಸಂಪನ್ಮೂಲ ಇಲಾಖೆ ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ನೇರ ಸವಾಲ್ ಹಾಕಿದರು.
ನಗರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನಾ ಬಾಧಿತ ಸಂತ್ರಸ್ತರ ಹೋರಾಟಕ್ಕೆ ಶುಕ್ರವಾರ ಬೆಂಬಲ ವ್ಯಕ್ತಪಡಿಸಿ ರಾಜಕಾರಣ ಭಾಷಣ ಬೇಡ, ಇದು ಹೋರಾಟದ ವೇದಿಕೆ ಅಂತ ತಮ್ಮ ಭಾಷಣದೂದ್ದಕ್ಕೂ ರಾಜಕೀಯ ಹಿತಾಸಕ್ತಿ ಅಡಗಿಸಿದಕ್ಕೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಯಿತು. ೫೨೪ ಮೀಟರ್ ಮುಳಗಡೆ ಬದಲಿಗೆ ೫೨೨ ಮೀಟರ್ ವರೆಗೆ ಮಾತ್ರ ಮುಳಗಡೆ ಮಾಡಲು ಕೆಬಿಜೆಎನ್‌ಎಲ್ ಸಭೆ ನಡುವಳಿ ತಮ್ಮ ಕಾಲದಲ್ಲಿ ಆಗಿದೆ. ಮಹಾ ವ್ಯವಸ್ಥಾಪಕರೇ ದಾಖಲೆ ನೀಡಿದ್ದಾರೆ ಅಂತ ಸಂತ್ರಸ್ತರು ಪತ್ರಗಳನ್ನು ಕಾರಜೋಳ ಮುಂದಿಟ್ಟರು.
ಇದರಿಂದ ಕೋಪಗೊಂಡ ಕಾರಜೋಳ ತಮ್ಮ ಮಾತಿನ ಲಹರಿ ಬದಲಾಯಿಸಿದರು, ೫೨೪ ಮೀಟರ್ ದಿಂದ ೫೨೨ ಮೀಟರ್ ವರೆಗೆ ಇಳಿಕೆ ಮಾಡಿದ್ದು ನಮ್ಮ ಅಧಿಕಾರ ಅವಽಯಲ್ಲಿ ಅಲ್ಲ. ಈ ಬಗ್ಗೆ ಸುಳ್ಳು ಹೇಳಲಾಗುತ್ತಿದೆ. ೫೨೪ ಮೀಟರ್ ವರೆಗೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕು ಅಂತ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆದುಕೊಂಡು ಬಂದು ಅನೇಕ ಜನ ರೈತರಿಗೆ ಪರಿಹಾರದ ಚಕ್ ನೀಡಿದ್ದೇನೆ. ಕಾಂಗ್ರೆಸ್ ತಮ್ಮನ್ನು ಮೋಸ ಮಾಡುತ್ತಿದೆ. ಇದನ್ನು ನಂಬಬೇಡಿ. ನಾನು ಚರ್ಚೆ ಬಂದರೇ ರಾಜ್ಯದಲ್ಲಿ ಕಾಂಗ್ರೆಸ್ ಇಲ್ಲದಂತೆ ಮಾಡುತ್ತೇನೆ. ಕೆಬಿಎನ್‌ಎಎಲ್ ಅಧಿಕಾರಿ ಏನು ಹೇಳುತ್ತಾನೆ, ಅದು ಕೇವಲ ಪ್ರೋಸಿಡಿಂಗ್ಸ್, ಯಾವುದೇ ಕಾರಣಕ್ಕೂ ಸರ್ಕಾರ ಆದೇಶ ಆಗಿಲ್ಲ. ಆಗಿದ್ದರೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲವೇ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎರಡನೇ ಸವಾಲ್ ಹಾಕಿದರು.
ಸ್ವ ಪಕ್ಷಿಯರಿಂದಲೇ ಪೀಠಿಕೆ
ಹೋರಾಟ ವೇದಿಕೆಗೆ ಬಹುತೇಕ ಬಿಜೆಪಿ ನಾಯಕರು ಆಗಮಿಸಿ ಬೆಂಬಲ ಘೋಷಣೆ ಮಾಡಿದರು. ಆರಂಭದಲ್ಲಿಯೇ ಸಂಸದ ಪಿ.ಸಿ.ಗದ್ದಿಗೌಡರ, ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಚರ್ಚೆಗೆ ಪೀಠಿಕೆ ಹಾಕಿದ್ದು ಚರ್ಚೆ ಗ್ರಾಸ್‌ವಾಯಿತು. ಜಂಟಿ ಸರ್ವೇ ಆಗಿಲ್ಲ. ಅದು ಹೇಗೆ ಕೆಬಿಎನ್‌ಎಲ್ ತೀರ್ಮಾನ ಆಯಿತು. ಪರಿಹಾರ ವಿಷಯದಲ್ಲಿ ಗೊಂದಲ, ರೈತರ ಆತಂಕಕ್ಕೆ ಹೇಗೆ ಕಾರಣವಾಯಿತು ಅಂತ ಹೇಳಿ ಅಂದಾಗ ಹೋರಾಟ ವೇದಿಕೆ ರಾಜಕೀಯ ಭಾಷಣಕ್ಕೆ ಜಟಾಪಟಿ ಸೃಷ್ಟಿಸಿತು. ಇದಕ್ಕೆ ಮತ್ತೆ ಆಕ್ರೋಶ ವ್ಯಕ್ತಪಡಿಸಿದ ಸಂತ್ರಸ್ತರು, ತಾವು ಅಽಕಾರದಲ್ಲಿ ಇದ್ದಾಗ ಏಕ ಕಾಲಕ್ಕೆ ಎಲ್ಲರಿಗೂ ಪರಿಹಾರ ನೀಡಿದ್ದರೇ ಹೀಗೆ ಆಗುತ್ತಿರಲಿಲ್ಲ. ಕೆಬಿಜೆಎನ್‌ಎಲ್ ಪ್ರೋಸಿಡೆಂಗ್ಸ್ ಆದರು ಗಮನಕ್ಕೆ ತರಬೇಕಿತ್ತು. ಯಾವುದನ್ನೂ ಮಾಡಿಲ್ಲ ಅಂತ ಸಂತ್ರಸ್ತರು ಪ್ರಶ್ನೆಗಳ ಸುರಿಮಳೆ ಗೈದರು.
ಇನ್ನು ಈ ನಡುವೇ ಸಾಮಾಜಿಕ ಹೋರಾಟಗಾರ ನಾಗರಾಜ ಕಲಗೋಡಕರ ರೈತರಿಗೆ ನೀಡುತ್ತಿರುವ ಪರಿಹಾರ ಧನದಲ್ಲಿ ಜಿಎಸ್‌ಟಿ ವಿಽಸಲಾಗುತ್ತಿದೆ. ಇದರಿಂದ ತ್ಯಾಗ ಮಾಡುತ್ತಿರುವ ಸಂತ್ರಸ್ತರಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬೇಡಿ ಅಂತ ಆಗ್ರಹಿಸಿದರು. ಇದರಿಂದ ಅಲ್ಪಹೊತ್ತು ಗಲಾಟೆ, ಗದ್ದಲಕ್ಕೆ ಕಾರಣವಾಯಿತು.
ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ವಿ.ಪ ಸದಸ್ಯ ಹನುಮಂತ ನಿರಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಸಂಗಣ್ಣ ಕಾತರಕಿ, ಅರುಣ ಕಾರಜೋಳ, ಮುತ್ತಣ್ಣ ಬೆಣ್ಣೂರ, ಜ್ಯೋತಿ ಭಜಂತ್ರಿ, ಶಿವಾನಂದ ಟವಳಿ, ಶಶಿಕಾಂತ ಪಾಟೀಲ.