

ಬೆಳಗಾವಿ: ಇಲ್ಲಿನ ಟಿಳಕವಾಡಿ ಶುಕ್ರವಾರ ಪೇಟೆಯಲ್ಲಿನ ಇಸ್ಕಾನ್ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.16ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 4.30ರಿಂದ ರಾತ್ರಿ 9ರ ವರೆಗೆ ಮಂಗಳಾರತಿ, ಜಪ, ಸಿಂಗಾರ ದರ್ಶನ, ಗುರುಪೂಜೆ ಮತ್ತು ಕೃಷ್ಣ ಕಥಾ ನಡೆಯಲಿದೆ. ನಂತರ ಇಡೀ ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ. ಸಂಜೆ 5.30ಕ್ಕೆ ವಿಶೇಷ ಅಭಿಷೇಕ, 6.30ಕ್ಕೆ ಗೌರ ಮತ್ತು ನರಸಿಂಹ ಆರತಿ, ರಾತ್ರಿ 10.45ಕ್ಕೆ ಭಕ್ತಿರಸಾಮೃತ ಸ್ವಾಮಿ ಮಹಾರಾಜರಿಂದ ವಿಶೇಷ ಪ್ರವಚನ ಹಾಗೂ ಮಧ್ಯರಾತ್ರಿ 12ಕ್ಕೆ ಮಹಾ ಆರತಿ ನಡೆಯಲಿದೆ ಎಂದು ಇಸ್ಕಾನ್ ಪ್ರಕಟಣೆಯಲ್ಲಿ ತಿಳಿಸಿದೆ.