ಕೂಡಲಸಂಗಮದಲ್ಲಿ ಹರಕೆ ತೀರಿಸಿದ ಅಭಿಮಾನಿ

bkt-15-14
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಆರೋಪದಿಂದ ಮುಕ್ತರಾಗಲಿ, ಅವರಿಗೆ ಎದುರಾಗಿರುವ ಎಲ್ಲ ಕಂಟಕಗಳು ದೂರವಾಗಲಿ ಎಂದು ಅವರ ಅಭಿಮಾನಿ ಶ್ರೀಶೈಲ ವಾಲಿಕಾರ ಅವರು ಹತ್ತು ಕಿ.ಮೀ. ದೀಡ ನಮಸ್ಕಾರ ಹಾಕಿ ಕೂಡಲಸಂಗಮದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರನ್ನು ಸನ್ಮಾನಿಸಿದರು.
Published on

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಆರೋಪದಿಂದ ಮುಕ್ತರಾಗಲಿ ಹಾಗೂ ಅವರಿಗೆ ಬಂದಿರುವ ಎಲ್ಲ ಕಂಟಕಗಳು ದೂರವಾಗಲಿ ಎಂದು ಅವರ ಅಭಿಮಾನಿಯೊಬ್ಬ ಹತ್ತು ದಿನಗಳ ಕಾಲ ದೀಡ ನಮಸ್ಕಾರ ಹಾಕುವ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ವಿಜಯಪುರ ಜಿಲ್ಲೆಯ ಶ್ರೀಶೈಲ ವಾಲಿಕಾರ ಎನ್ನುವ ಅಭಿಮಾನಿ ಬಾಗಲಕೋಟೆ ಜಿಲ್ಲೆಯ ಸಂಗಮ ಕ್ರಾಸ್‌ನಿಂದ ಕೂಡಲಸಂಗಮ ಕ್ಷೇತ್ರದ ವರೆಗೂ ಹತ್ತು ಕಿ.ಮೀ. ದೀಡ ನಮಸ್ಕಾರ ಹಾಕಿದರು. ಪ್ರತಿ ದಿನ ಒಂದು ಕಿ.ಮೀ. ನಂತೆ ದೀಡ ನಮಸ್ಕಾರ ಹಾಕುತ್ತ ಹೊರಟಿದ್ದ ಶ್ರೀಶೈಲ ಕೂಡಲಸಂಗಮ ತಲುಪಿ, ಅಲ್ಲಿ ಸಂಗಮೇಶ್ವರ ದೇವಸ್ಥಾನ ಹಾಗೂ ಬಸವಣ್ಣನ ಐಕ್ಯ ಮಂಟಪದಲ್ಲಿ ಪೂಜೆ ಸಲ್ಲಿಸಿದ್ದಾನೆ.

ಹತ್ತು ಕಿ.ಮೀ. ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದ ಸಿದ್ದರಾಮಯ್ಯ ಅಭಿಮಾನಿ ಶ್ರೀಶೈಲ ಅವರನ್ನು ಸ್ಥಳೀಯರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net