

ಸಂತೋಷ ಕೃ. ದೇಶಪಾಂಡೆ ಬಾಗಲಕೋಟೆ: ಆಧುನಿಕ ಬದುಕಿನ ಕಾಲಘಟ್ಟದಲ್ಲಿ ಇಂದು ಎಲ್ಲವು ರೆಡಿಮೆಡ್. ಒಂದು ಕಾಲದಲ್ಲಿ ನಮ್ಮ ನಿತ್ಯದ ಜೀವನದ ಒಡನಾಡಿಯಾಗಿದ್ದ ಕರ,ಕುಶಲಗಳು, ಮನೆಮದ್ದುಗಳು ಮಾಯವಾಗ ತೊಡಗಿವೆ. ಆದರೇ ಇಲ್ಲೊಂದು ಕೌಶಲ ಪ್ರದರ್ಶನ ಮತ್ತು ಮಾರಾಟ ಜವಾರಿ ದಿನಗಳ ಮಹತ್ವ ಸಾರುವದರ ಜೊತೆಗೆ ಕೋಟೆನಗರಿಯನ್ನ ಆಕರ್ಷಿಸುತ್ತಿದೆ...!!!
ನಗರದ ಬಿವಿವಿ ಸಂಘದ ಗೌರಿ ಶಂಕರ ಕಲ್ಯಾಣ ಮಂಟಪದ ಆವರಣದಲ್ಲಿ ಬಿವಿವಿ ಸಂಘದ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕೌಶಲ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಹಳ್ಳಿ ಸೊಗಡು, ಸೊಬಗು, ಕಲ ಕುಸುರಿಯ ನೈಜತೆ ಅನಾವರಣಗೊಳಿಸಿದೆ.
ಸ್ವಾವಲಂಬಿ ಬದುಕು...
ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಇಂದಿರಾಗಾಂಽ ಸಂಜೀವಿನಿ ಮಹಿಳಾ ಸ್ವ ಸಂಘದ ಸದಸ್ಯರು ಸಿದ್ಧಪಡಿಸಿದ (ಹ್ಯಾಂಡ್ ಮೇಡ್ ಬ್ಯಾಗ್) ಕೈಗಳಿಂದ ಸಿದ್ಧಪಡಿಸಿದ ನವನವೀನ ಬ್ಯಾಗಗಳು ಗಮನ ಸೆಳೆದಿವೆ. ಮಹಿಳೆಯರ ಅಚ್ಚುಮೆಚ್ಚಿನ ಬ್ಯಾಗಗಳು ಇಲ್ಲಿದ್ದು, ಈ ಸಂಘದ ಸದಸ್ಯರು ಕಳೆದ ೧೫ ವರ್ಷಗಳಿಂದ ಈ ವೃತ್ತಿಯಲ್ಲಿ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ. ಪ್ರದರ್ಶನ ಮತ್ತು ಮರಾಟಕ್ಕೆ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ೮ ರಾಜ್ಯಗಳಿಗೆ ತೆರಳಿ ತಮ್ಮ ಕೌಶಲ ಶಕ್ತಿ ಪ್ರಚೂರ ಪಡಿಸಿದ್ದಾರೆ. ಪ್ರತಿ ತಿಂಗಳು ಎಲ್ಲ ಖರ್ಚು, ವೆಚ್ಚ ಭರಿಸಿ ೧೦ ಕ್ಕೂ ಹೆಚ್ಚು ಮಹಿಳಾ ಸದಸ್ಯರು ತಲಾ ೮ ರಿಂದ ೧೦ ಸಾವಿರ ಆದಾಯ ನಿಗಽ ಮಾಡಿಕೊಂಡಿದ್ದಾರೆ.
ಇನ್ನು ಕಟ್ಟಿಯಲ್ಲಿ ಸಿದ್ಧಪಡಿಸಿದ ಟ್ರಕ್, ಗಿಲ ಕಂಚಿ, ಸ್ಕೀಟಿಂಗ್ ಸೇರಿದಂತೆ ಮಕ್ಕಳ ಆಟಿಕೆ ವಸ್ತುಗಳು ಆಕರ್ಷಿಸುತ್ತೀವೆ. ಇಳಕಲ್ಲ ಸಾರಿ, ಗುಳೇದಗುಡ್ಡ ಕುಪ್ಪಸ ತನ್ನ ಗಮ್ಯತೆ ಮೆರೆಯುತ್ತೀವೆ. ಆರೋಗ್ಯಕ್ಕೆ ಬೇಕಾದ ಗುಣಮಟ್ಟದ ಕುಸಬಿ ಎಣ್ಣೆ, ಶೇಂಗಾ ಎಣ್ಣೆ, ಜೋಳ, ರಾಗಿ, ಗೋಽ ಹಿಟ್ಟು ಆಹಾರದ ಆಯ್ಕೆಯಲ್ಲಿ ಇರಬೇಕಾದ ಮಹತ್ವ ಸಾರಿ ಹೇಳುತ್ತೀವೆ.
ಒಟ್ಟಾರೆ ೨೦ ಕ್ಕೂ ಹೆಚ್ಚು ಮಳಿಗೆಗಳು ಗ್ರಾಮೀಣ ಸೊಗಡು, ಕೌಶಲ, ಸ್ವಾವಲಂಬಿ ಬದುಕಿನ ಶಕ್ತಿಯನ್ನು ತೆರೆದಿಟ್ಟಿವೆ. ಹಬ್ಬದ ಸಂದರ್ಭದಲ್ಲಿ ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿ ಮಳೆಗೆದಾರರರಿಗೆ ವಾಸ್ಥವ ಸ್ಥಿತಿ ತೀವ್ರ ನೋವು ಉಂಟು ಮಾಡಿದೆ. ಎರಡು ದಿನವಾದರು ಸಾರ್ವಜನಿಕರ ಭೇಟಿ ನಿರೀಕ್ಷೆಮಟ್ಟಕ್ಕೆ ತಲುಪದಿರುವುದು ಸಂಘಕರಿಗೂ ಬೇಸರ ಮೂಡಿಸಿದೆ. ಸಾರ್ವಜನಿಕರು ನಮ್ಮತನ ಮರೆತುಬಿಟ್ಟರಾ? ಎನ್ನುವ ಜಿಜ್ಞಾಸೆ ಕಾಡುತ್ತಿದೆ.
ರೇಶ್ಮೆ ಗೂಡಿನ ಹಾರ..
ಶುಭ ಸಮಾರಂಭಗಳಲ್ಲಿ ಹೂ, ಮೈಸೂರು ಸ್ಯಾಂಡಲ್ ಹಾರಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತೀವೆ. ಈಚೆಗೆ ಪ್ಲಾಸ್ಟಿಕ್ ಹಾರಗಳ ಹಾವಳಿ ಹೆಚ್ಚಾಗಿವೆ. ಮನೆ, ಮಂದಿರಗಳಲ್ಲೂ ಪ್ಲಾಸ್ಟಿಕ್ ಮಾರ್ಧನಿಸುತ್ತಿದೆ. ಇದಕ್ಕೆ ಸವಾಲು ಒಡ್ಡುವಂತೆ ಚನ್ನಪಟ್ಟಣದ ಝನ್ ಮಹಿಳಾ ಸಂಘವು ರೇಶ್ನೆ ಗೂಡಿನ ಹಾರ ಹೊಸ ಮಾದರಿಯಲ್ಲಿ ಸಿದ್ಧಪಡಿಸಿ ಇಲ್ಲಿ ಮಳಿಗೆ ಸ್ಥಾಪಿಸಿದೆ. ಆಕರ್ಷಕವಾಗಿ ಕಾಣುವ ಹಾರಗಳು ನೀರಿನಲ್ಲಿ ತೊಳೆದು ಮರು ಬಳಕೆಗೆ ಅವಕಾಶವಿದೆ. ೨೦೦ ರೂ. ದಿಂದ ೪೦೦ ರೂ. ವರೆಗೆ ದರ ನಿಗಽ ಮಾಡಲಾಗಿದೆ. ಉಳಿದ ಎಲ್ಲ ಹಾರಗಳಿಗ್ಗಿಂತಲು ಇವು ಆಕರ್ಷಕವಾಗಿವೆ.
ಆಯುರ್ವೇದಿಕ ಮನೆ ಮದ್ದುಗಳು...
ನಿತ್ಯದ ಬದುಕಿನಲ್ಲಿ ಅನಾರೋಗ್ಯ, ಮೈ ಕೈ ನೋವು, ಕಿಡ್ನಿಯಲ್ಲಿ ಹಳ್ಳ, ವಾತಾ, ಪಿತ್ತ, ಕ-ï ಸಾಮಾನ್ಯ. ಇಂಗ್ಲೀಷ ಮೆಡಿಸೀನ್ ತಾತ್ಕಾಲಿಕ ಪರಿಹಾರ ಒದಗಿಸುತ್ತವೆ. ಆದರೇ ಆಯುರ್ವೇದಿಕ ಗಿಡಮೂಲಿಕೆಗಳು ಮನೆ ಮದ್ದುಗಳಿಂದ ಆಗುವ ಲಾಭ, ಉಪಯುಕ್ತತೆ ಬಗ್ಗೆ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕಮಲ ಹೂವಿನ ಗುಲಕಂದ, ಅಶ್ವಗಂಧ, ಜಾಜಿಕಾಯಿ ತೊಗಟೆಯಿಂದ ಆಗುವ ಪ್ರಯೋಜನೆಗಳು ಹಾಗೂ ನಮ್ಮ ಸುತ್ತಮುತ್ತಲೀನಲ್ಲಿ ದೊರೆಯುವ ಮದ್ದುಗಳು ಎಷ್ಟೊಂದು ಮಹತ್ವ ಅಂತ ದಾವನಗೆರೆಯ ಸಂಪನ್ಮೂಲ ವ್ಯಕ್ತಿ ಚಂದ್ರೇಗೌಡ ಪಿ. ಗ್ರಾಹಕರಿಗೆ ಮನಮುಟ್ಟುವಂತೆ ತಿಳಿಸಿ ಜಾಗೃತಿ ಮೂಡಿಸುತ್ತಿದ್ದಾರೆ.
ಬಿದರಿನ ಕುಲ ಕಸುಬು ಪ್ರದರ್ಶನ
ಕುಲ ಕಸುಬಿನಿಂದ ಸಿದ್ದಪಡಿಸಿದ ಬೀದರಿನಿಂದ ತಯಾರಿಸಿದ ಬಿಸನಕಿ, ಪೆನ್ ಸ್ಟ್ಯಾಂಡ್, ಕೀ ಹೋಲ್ಡರ್, ಪ್ಲಾವರ್ ವಾಲ್ ಪ್ಲೇಟ್, ಮೊಬೈಲ ಸ್ಟ್ಯಾಂಡ್, ಆಕಾಶ ಪುಟ್ಟಿ, ಬಳೆ, ಕೀ ಬೆಂಚ್, ಟೀ ಟ್ರೇ, ಹೇರ್ ಕ್ಲಿಪ್ ಕೂಡಾ ಇಲ್ಲಿವೆ. ಪ್ಲಾಸ್ಟಿಕ್ ಮುಕ್ತ ಜೀವನ ಹೇಗೆ ಎನ್ನುವುದು ಕೂಡಾ ಇಲ್ಲಿನ ವಿಶೇಷಗಳಲ್ಲಿ ಒಂದು. ಬಿದರಿನಿಂದ ಹೇಗೆ ನಮ್ಮ ಅಗತ್ಯ ವಸ್ತುಗಳನ್ನು ಸಿದ್ದಪಡಿಸಬಹುದು ಎನ್ನುವುದು ಕೂಡಾ ಕೌಶಲಕ್ಕೆ ಸಾಕ್ಷಿಯಾಗಿದೆ.
ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ, ರಜತ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಕೌಶಲ ಪ್ರದರ್ಶನ ಅನೇಕ ಗ್ರಾಮೀಣ ಸೊಗಡು, ಸ್ವಾವಲಂಬಿ ಬದುಕು ಅನಾವರಣಗೊಂಡಿದೆ. ನಮ್ಮ ಸಂಸ್ಥೆಯಿಂದ ತರಬೇತಿ ಪಡೆದು ಬದುಕು ಕಟ್ಟಿಕೊಂಡವರು ತಮ್ಮ ಕೌಶಲ ಪ್ರದರ್ಶಿಸುತ್ತಿದ್ದಾರೆ. ನಮ್ಮ ದೇಶಿತನ ಬಿಡಬಾರದು. ಮಳಿಗೆಗಳಿಗೆ ಸಾರ್ವಜನಿಕರು ಭೇಟಿ ನೀಡಬೇಕು. ಆಧುನಿಕ ಭರಾಟೆ ನಡುವೆ ನಮ್ಮ ಗಮ್ಯತೆ ಉಳಿಸಿ ಬೆಳೆಸಬೇಕು ಎಂದರು.
ಇನ್ನು ನಮ್ಮ ಸಂಘದಿಂದ ವಿವಿಧ ಬ್ಯಾಗಗಳನ್ನು ತಯಾರಿ ಮಾಡುತ್ತೀದ್ದೇವೆ. ಬಿವಿವಿ ಗ್ರಾಮೀಣ ಪ್ರತಿಷ್ಠಾನದಲ್ಲಿ ಕಳೆದ ೧೦ ವರ್ಷದ ಹಿಂದೆ ತರಬೇತಿ ಪಡೆದುಕೊಂಡು ಸ್ವ ಗ್ರಾಮದಲ್ಲಿ ಉದ್ಯೋಗ ಆರಂಭಿಸಿದೆ. ನನ್ನ ಜೊತೆ ಅನೇಕರು ಕೈ ಜೋಡಿಸಿದರು. ಇಂದು ೮ ರಾಜ್ಯಗಳಲ್ಲಿ ಬ್ಯಾಗ್‌ಗಳ ಪ್ರದರ್ಶನ ಮಾರಾಟ ಮಾಡುತ್ತೀದ್ದೇವೆ. ಸ್ವಾವಲಂಬಿ ಬದುಕು ಖುಷಿ ತಂದಿದೆ ಎಂದು ಇಂದಿರಾ ಗಾಂಽ ಸಂಜೀವಿನಿ ಮಹಿಳಾ ಸಂಘ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಶೀಲಾ ಮೇಟಿ ತಿಳಿಸಿದರು.