ಕುಶಾವರ ಗ್ರಾಪಂಗೆ ಕೆ.ವಿ.ಸುನೀತಾ ಅಧ್ಯಕ್ಷೆ

1blrp5
Published on

ಬೇಲೂರು: ತಾಲೂಕಿನ ಕುಶಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ವಿ.ಸುನೀತಾ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಚಂದ್ರಕಲಾ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚೌಡನಹಳ್ಳಿ ಕ್ಷೇತ್ರದ ಕೆ.ವಿ.ಸುನೀತಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಎಂ.ಮಮತಾ, ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಕೆ.ವಿ.ಸುನೀತಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಅಧ್ಯಕ್ಷೆ ಕೆ.ವಿ.ಸುನೀತಾ ಮಾತನಾಡಿ, ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರದಿಂದಾಗಿ ಅಧ್ಯಕ್ಷೆಯಾಗಿದ್ದು, ಇನ್ನುಳಿದಿರುವ ಅವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಉಪಾಧ್ಯಕ್ಷರು, ಸದಸ್ಯರೊಂದಿಗೆ ಸೇರಿ ಉತ್ತಮ ಕೆಲಸ ಮಾಡಲು ಮುಂದಾಗುತ್ತೇನೆ ಎಂದರು.

ಕುಶಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೇಮರಾಜು, ಸದಸ್ಯರಾದ ನಂದೀಶ್, ಮಂಜುನಾಥ್, ಸ್ವಾಮಿ, ಚಂದ್ರಕಲಾ, ವೇದಾ, ಅರೇಹಳ್ಳಿ ಪಿಎಸ್‌ಐ ಶೋಭಾ ಬೀರದಾರ್, ಪಿಡಿಒ ಅಶೋಕ್, ಕಾರ್ಯದರ್ಶಿ ದಿವಾಕರ್ ಹಾಗೂ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net