

ಬಾಗಲಕೋಟೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುರಿಗಾಯಿಗಳ ಮೇಲಿನ ದೌರ್ಜನ್ಯ ತಡೆಗಟ್ಟಲು ಸೂಕ್ತ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು ಹಾಗೂ ಬಾದಾಮಿ ತಾಲೂಕಿನ ಉಗಲವಾಡ ಗ್ರಾಮದ ಕುರಿಗಾಯಿ ಶರಣಪ್ಪ ಜುಮ್ಮನಕಟ್ಟಿ ಹತ್ಯೆ ಮಾಡಿದ ಅಪರಾಽಗಳಿಗೆ ಕಠಿಣ ಶಿಕ್ಷೆ ವಿಽಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕುರಿಗಾರರ ಮತ್ತು ಪಶುಪಾಲಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕುರಿಗಾಯಿಗಳು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಅವರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ರಾಜ್ಯದಲ್ಲಿ ಜಾತಿ, ಮತ, ಪಂಥ ಮೀರಿ ಕುರಿ ಸಾಕಾಣಿಕೆ, ಪಶುಗಳ ಹಾರೈಕೆ ಮಾಡಲಾಗುತ್ತದೆ. ಕೋಟ್ಯಂತರ ಜನರು ಇದನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೇ ಕುರಿಗಾರರು, ಪಶು ಪಾಲಕರ ಮೇಲೆ ದಿನದಿಂದ ದಿನಕ್ಕೆ ಹಲ್ಲೆ, ಹತ್ಯೆ, ದೌರ್ಜನ್ಯ ನಡೆಯುತ್ತಲೆ ಇದೇ. ಉಗಲವಾಡ ಗ್ರಾಮದ ಕುರಿಗಾಯಿ ಶರಣಪ್ಪ ಜುಮ್ಮನಕಟ್ಟಿ ಹತ್ಯೆಯೇ ಇದಕ್ಕೆ ಸಾಕ್ಷಿ. ಇಂತಹ ಘಟನೆಗಳು ನಡೆಯುತ್ತಿದ್ದರು ಯಾವ ಸರ್ಕಾರಗಳು ರಕ್ಷಣೆಗೆ ಕಾನೂನು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದ್ಯ ಸಿಎಂ ಸಿದ್ದರಾಮಯ್ಯ ಸರ್ಕಾರ ಅವಽಯಲ್ಲಿಯೂ ಸೂಕ್ತ ಕಾನೂನು ಜಾರಿಗೆ ತರುವಂತೆ ಒತ್ತಾಯ ಮಾಡುತ್ತಾ ಬಂದಿದೆ. ಆದರೇ ಯಾವ ಸರ್ಕಾರಗಳು ಕಿವಿಗೊಡುತ್ತಿಲ್ಲ. ೨೦೨೨ ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಲಕ್ಷಿ÷್ಮÃ ಕಳ್ಳಿಮನಿ ಎನ್ನುವ ಕುರಿಗಾಯಿ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ ನಡೆದಿತ್ತು. ಬಸವರಕಲ್ಯಾಣ ತಾಲೂಕಿನ ಪ್ರಭು ಮೇತ್ರೆ ಅವರನ್ನು ಕೊಲೆ ಮಾಡಲಾಗಿತ್ತು. ಹೀಗೆ ನೂರಾರು ಪ್ರಕರಣಗಳು ಕಣ್ಣು ಮುಂದೆ ಇದ್ದರು ಯಾರೊಬ್ಬರು ರಕ್ಷಣೆ, ಹಿತಕ್ಕೆ ಮುಂದಾಗಿಲ್ಲ. ಅಽಕಾರಿಗಳ ನಿರ್ಲಕ್ಷ್ಯ ಧೋರಣೆಯೂ ಇದೆ. ಪ್ರಕರಣಗಳಿಗೆ ಸಂಬAದಪಟ್ಟAತೆ ಶಿಕ್ಷೆಯಾಗಿಲ್ಲ. ಕಾನೂನು ರೂಪಿಸುವುದೇ ಸೂಕ್ತ ಮಾರ್ಗ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಬಳಗಾನೂರ, ಪ್ರಧಾನ ಕಾರ್ಯದರ್ಶಿ ಪರಶುರಾಮ ಮಂಟೂರ, ಕಾಶಿನಾಥ ಹುಡೇದ, ವೀರಣ್ಣ ಹಳೇಗೌಡರ, ಮಹಾಂತೇಶ ಹಟ್ಟಿ, ಬಸವರಾಜ ಧರ್ಮಂತಿ ಇತರರು ಇದ್ದರು.