ಕುಡಿತ ಬಿಡಿಸುವ ಉಚಿತ ಶಿಬಿರ

Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಸುತ್ತೂರು ಶ್ರೀ ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠ, ಶ್ರೀ ಸಾಲೂರು ಬೃಹನ್ಮಠ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಏ.14 ರಿಂದ 23ರವರೆಗೆ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ.

ಉತ್ತಮ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಸುತ್ತೂರು ಮಠವು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತರಾಗಿಸಲು ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಇದೀಗ 20ನೇ ಶಿಬಿರವನ್ನು ಮ.ಬೆಟ್ಟದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದ್ದರಿಂದ ಆಸಕ್ತಿಯುಳ್ಳವರು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹಾಗೆಯೇ ಆಸಕ್ತಿಯುಳ್ಳವರು ಸಹ ಮದ್ಯ ವ್ಯಸನಿಗಳನ್ನು ಶಿಬಿರಕ್ಕೆ ಕರೆ ತರಬಹುದು. ಶಿಬಿರಾರ್ಥಿಗಳು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಭಾವಚಿತ್ರ, ಅಗತ್ಯ ಬಟ್ಟೆ ಹಾಗೂ ಹೊದಿಕೆಯನ್ನು ತರಬೇಕು.

ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ: ಚುಂಚನಹಳ್ಳಿ ಶ್ರೀಗಳು (9945494612), ಡಾ.ಎಂಪಿ ಸೋಮಶೇಖರ್ (9448653897) ಎಸ್.ಬಸವರಾಜು (9886476142), ಪಿ.ಸುರೇಶ್ (9141624840), ಕೆ.ವಿ.ಮಾದೇಶ್ (9481888181) ಸಂಪರ್ಕಿಸುವಂತೆ ಶಿಬಿರದ ಸಂಚಾಲಕ ಎಂ.ಪಿ.ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net