ಕಿಂಡಿ ಅಣೆಕಟ್ಟು ಸ್ಥಾಪನೆಗೆ ವಿರೋಧ

7ankola1a
Published on

ಅಂಕೋಲಾ: ಹೊನ್ನಳ್ಳಿ ಗ್ರಾಮದಲ್ಲಿ ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ವಿುಸಲು ಈಗಾಗಲೇ ಸರ್ವೆ ಕಾರ್ಯ ಮುಗಿಸಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಕಿಂಡಿ ಅಣೆಕಟ್ಟು ನಿರ್ವಿುಸಲು ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಜಿ.ಪಂ. ಮಾಜಿ ಸದಸ್ಯ ಜಿ.ಎಂ. ಶೆಟ್ಟಿ ಮಾತನಾಡಿ, ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ವಿುಸಿದರೆ ಡೋಂಗ್ರಿ, ಅಗಸೂರು, ಹಿಲ್ಲೂರು, ಸುಂಕಸಾಳ, ಅಚವೆ, ವಾಸರಕುದ್ರಿಗೆ ಪಂಚಾಯಿತಿಯ ಸಾವಿರಾರು ಎಕರೆ ಭೂಮಿ ಮುಳುಗಡೆಯಾಗಲಿದೆ. ಇದರಿಂದ ರೈತರು ನಿರ್ಗತಿಕರಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ವಣಗೊಳ್ಳಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಸ್ಪಂದನ ಫೌಂಡೇಷನ್ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಹಿಂದುಳಿದ ಬಡ ರೈತರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಅಣೆಕಟ್ಟು ನಿರ್ವಣವಾದರೆ ಬದುಕು ಸರ್ವನಾಶವಾಗಲಿದೆ. ಒಂದು ವೇಳೆ ಕಿಂಡಿ ಅಣೆಕಟ್ಟು ನಿರ್ವಿುಸಿದರೆ ನಮ್ಮ ಸಮಾಧಿಯ ಮೇಲೆ ನಿರ್ವಿುಸಲಿ ಎಂದರು.

ಜಿ.ಪಂ. ಸದಸ್ಯ ಜಗದೀಶ ನಾಯಕ ಮೊಗಟಾ, ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ರೈತ ಮುಖಂಡ ಶಾಂತಾರಾಮ ನಾಯಕ ಇಲ್ಲಿಯ ಸಮಸ್ಯೆಗಳ ಕುರಿತು ವಿವರಿಸಿದರು. ಸ್ಥಳಕ್ಕೆ ಆಗಮಿಸಿದ ಕುಮಟಾ ಉಪ ವಿಭಾಗಾಧಿಕಾರಿ ಅಜೀತ ಅವರಿಗೆ ಮನವಿ ಸಲ್ಲಿಸಿದರು.

ಅಗಸೂರು ಗ್ರಾ.ಪಂ. ಉಪಾಧ್ಯಕ್ಷ ಯಶ್ವಂತ ಗೌಡ, ಸದಸ್ಯೆ ನಿರ್ಮಲಾ ನಾಯಕ, ತಾ.ಪಂ. ಸದಸ್ಯ ವಿಲ್ಸನ್ ಡಿಕೋಸ್ತಾ, ವಾಸರಕುದ್ರಿಗೆ ಗ್ರಾ.ಪಂ. ಉಪಾಧ್ಯಕ್ಷ ಪ್ರದೀಪ ನಾಯಕ, ಡೋಂಗ್ರಿ ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಪ್ರಮುಖರಾದ ಬಾಲಚಂದ್ರ ಶೆಟ್ಟಿ, ಬಾಲಚಂದ್ರ ನಾಯಕ, ಗೌರೀಶ ನಾಯಕ, ರಾಘವೇಂದ್ರ ಗಾಂವ್ಕರ, ರಮೇಶ ನಾಯಕ, ಉದಯ ಗುನಗಾ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಐಎನ್​ಎಸ್ ಕದಂಬ ನೌಕಾನೆಲೆ ಹಾಗೂ ಇತರ ಭಾಗಗಳಿಗೆ ನೀರಿನ ಕೊರತೆ ಇರುವುದರಿಂದ ಸರ್ಕಾರ ಕಿಂಡಿ ಅಣೆಕಟ್ಟು ನಿರ್ವಿುಸಲು ಪ್ರಾಥಮಿಕ ಸರ್ವೆ ಕಾರ್ಯ ಮುಗಿಸಿದ್ದಾರೆ. 20 ದಿನಗಳ ಒಳಗಾಗಿ ಗ್ರಾಮಸಭೆ ಕರೆದು ಅಲ್ಲಿನ ಸಾಧಕ ಬಾಧಕಗಳ ಕುರಿತು ರ್ಚಚಿಸಿ ಅಂತಿಮ ನಿರ್ಣಯ ಕೈಗೊಳ್ಳಲು ಅವಕಾಶವಿದೆ. ಒಂದು ವೇಳೆ ಕಿಂಡಿ ಆಣೆಕಟ್ಟು ನಿರ್ವಿುಸುವುದಾದರೆ ಸ್ಥಳೀಯರಿಗೆ ಹೆಚ್ಚಿನ ಪರಿಹಾರ ಸರ್ಕಾರ ನೀಡಲಿದೆ.| ಅಜೀತ ಕುಮಟಾ ಉಪವಿಭಾಗಾಧಿಕಾರಿ

ಕದ್ರಾ ಜಲಾಶಯಕ್ಕಾಗಿ ನಮ್ಮನ್ನು ಕೊಡಸಳ್ಳಿಯಿಂದ ಎತ್ತಂಗಡಿ ಮಾಡಿ ಡೋಂಗ್ರಿ ಪಂಚಾಯಿತಿ ವ್ಯಾಪ್ತಿಗೆ ಸ್ಥಳಾಂತರಿಸಲಾಗಿತ್ತು. ನಂತರ ನಮ್ಮ ಕಷ್ಟಕ್ಕೆ ಯಾವ ಅಧಿಕಾರಿಗಳೂ ಬರಲಿಲ್ಲ. ಅವರ ಆಶ್ವಾಸನೆ ಹಾಗೆ ಉಳಿದು ಹೋಯಿತು. ನಮ್ಮ ಶ್ರಮದಿಂದ ನಾವು ಮತ್ತೆ ತಲೆಯೆತ್ತಿದ್ದೇವೆ. ಮತ್ತೆ ನಮ್ಮನ್ನೆಲ್ಲ ನಿರಾಶ್ರಿತರನ್ನಾಗಿ ಮಾಡಬೇಡಿ. ದಯವಿಟ್ಟು ಪ್ರಾಥಮಿಕ ವರದಿಯನ್ನು ಬೆಂಕಿಗೆ ಹಾಕಿ ಸುಟ್ಟು ಬಿಡಿ.| ಶಿವರಾಮ ಗಾಂವ್ಕರ, ಜಿಲ್ಲಾಧ್ಯಕ್ಷರು, ಭಾರತೀಯ ಕಿಸಾನ್ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net