ಕಿಂಗ್ ಐಸ್ ಕ್ರೀಮ್ ಪಾರ್ಲರ್ ಆರಂಭ

bkt-18-2
ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಘದ ಸದಸ್ಯ ಚಂದ್ರಶೇಖರ ಬ್ಯಾಳಿ ಕಿಂಗ್ ಐಸ್ ಕ್ರೀಮ್ ಪಾರ್ಲರ್ ಉದ್ಘಾಟಿಸಿದರು. ಮುಖಂಡರಾದ ಪ್ರಕಾಶ ಹದ್ಲಿ, ಸಂಜಯ ಪಲ್ಲೇದ, ಕಂಪನಿ ಅಽಕಾರಿಗಳಾದ ಯಲ್ಲಪ್ಪ ಗುರುವ, ಪ್ರಶಾಂತ ಜಂಬಗಿ ಇತರರು ಇದ್ದರು.
Published on

ಬಾಗಲಕೋಟೆ: ವಿಜಯ ಕಾಂತ ಡೈರಿ ಕಂಪನಿಯೂ ನೂತನವಾಗಿ ಪರಿಚಯಿಸಿರುವ ಕಿಂಗ್ ಐಸ್ ಕ್ರೀಮ್ ಬ್ರಾಂಡ್ ಕೋಟೆನಗರಿ ಮಾರುಕಟ್ಟೆಗೆ ಪ್ರವೇಶಿಸಿದ್ದು, ಇಲ್ಲಿನ ಬಿವಿವಿ ಸಂಘದ ಎಸ್.ನಿಂಗಲಿAಗಪ್ಪ ಮೆಡಿಕಲ್ ಕಾಲೇಜು ಹಾಗೂ ಹಳೇ ಬಾಗಲಕೋಟೆಯ ಬಿವಿವಿ ಸಂಘದ ಡಿಪ್ಲೋಮಾ ಕಾಲೇಜು ಆವರಣದಲ್ಲಿ ಸ್ಥಾಪಿಸಲಾಗಿರುವ ಕಿಂಗ್ ಐಸ್ ಕ್ರೀಮ್ ಪಾರ್ಲರ್ ಮಳಿಗೆ ಬುಧವಾರ ಚಾಲನೆ ದೊರೆಯಿತು.

ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸಂಘದ ಸದಸ್ಯ ಚಂದ್ರಶೇಖರ ಬ್ಯಾಳಿ ಪಾಲರ್ರ್ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ನೆರೆದಿದ್ದ ನೂರಾರು ಜನ ಐಸ್ ಕ್ರೀಮ್ ಖರೀದಿಸಿ ಸವಿರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಮಾತನಾಡಿ, ವಿಜಯಕಾಂತ ಡೈರಿ ರೈತರ ಉತ್ಪನ್ನಗಳಿಗೆ ಹೊಸ ಶಕ್ತಿ ತುಂಬುವ ಕೆಲಸ ಆರಂಭದಿAದಲು ಮಾಡಿಕೊಂಡು ಬಂದಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಅವಕಾಶಗಳ ಮಾಹಪೂರವನ್ನೇ ಸೃಷ್ಟಿಸಿದೆ. ಇದೀಗ ಹೊಸ ರೀತಿಯಲ್ಲಿ ಹೆಜ್ಜೆ ಇಟ್ಟಿದ್ದು, ವಿವಿಧ ರೀತಿಯ ಐಸ್ ಕ್ರೀಮ್, ಹಾಲಿನ ಉತ್ಪನ್ನಗಳನ್ನು ಪರಿಚಯಿಸಿದೆ. ಕಿಂಗ್ ಪಾರ್ಲರ್ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಬಾಗಲಕೋಟೆ ನಗರದಲ್ಲಿ ಎರಡು ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಆಹಾರ ಪ್ರಿಯರಿಗೆ ಸಂತೋಷ ಉಂಟು ಮಾಡಿದೆ ಎಂದರು.

ವಿಜಯಕಾಂತ ಡೈರಿಯು ಕಿಂಗ್ ಐಸ್ ಕ್ರಿಮ್ ಹೆಸರಿನಲ್ಲಿ ವಿವಿಧ ಬಗೆಯ ಐಸ್ ಕ್ರೀಮ್ ಮಾರುಕಟ್ಟೆಗೆ ಬಿಟ್ಟಿದೆ. ಚಾಕೂಲೇಟ್, ಬಟರ್ ಸ್ಕಾಚ್, ಅಲ-ೆÊನ್ ಮ್ಯಾಂಗೋ, ಮಟಕಾ ಕೂಲಿ, ಚಿಕ್ಕು, ಬ್ಲೂ ಬೇರಿ, ಕಾಟನ್ ಕ್ಯಾಂಡಿ, ಕೋರೇಜ್ ಝೂನ್ ಹಾಗೂ ಹಾಲಿನ ಉತ್ಪನ್ನಗಳಿಂದ ಸಿದ್ಧವಾಗುವ ಲಸ್ಸಿ, ಮಜ್ಜಗಿ, ಬಾದಾಮಿ ಮಿಲ್ಕ, ಮ್ಯಾಂಗ್ಯೂ ಶ್ರೀಕಂಡ, ಇಲಾಯಿಚಿ ಶ್ರೀಕಂಡ, ಪನ್ನಿರ್, ಸ್ಟ್ಯಾಂಡರ್ಡ್ ಮಿಲ್ಕ್, -ÀÅಲ್ ಕ್ರೀಮ್ ಮಿಲ್ಕ್ ಸೇರಿದಂತೆ ನಾನಾ ನಮೂನಿಯ ಹಾಲಿನ ಉತನ್ನಗಳು ಪಾಲರ್ರ್ ಲಭ್ಯವಿದೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಇಷ್ಟ ಪಡುವ ಖಾದ್ಯ ಇಲ್ಲಿ ದೊರೆಯುತ್ತದೆ.

ಬಿವಿವಿ ಸಂಘದ ಕಟ್ಟಡ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ವಸತಿ ವಿಭಾಗದ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಮುಖಂಡರಾದ ಪ್ರಕಾಶ ಹದ್ಲಿ, ಸಂಜಯ ಪಲ್ಲೇದ, ಕಂಪನಿ ಅಽಕಾರಿಗಳಾದ ಯಲ್ಲಪ್ಪ ಗುರುವ, ಪ್ರಶಾಂತ ಜಂಬಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net