ಕಾಶಪ್ಪನವರ ಅಝೆಂಡಾ ಈಸ್ ಢಿಪರೆಂಟ್

bkt-20-2 a
Published on

ಬಾಗಲಕೋಟೆ: ಪಂಚಮಸಾಲಿ ಪೀಠದಲ್ಲಿ ಭುಗಿಲೆದ್ದ ವಿವಾದದ ವಿಚಾರ ಮಾಜಿ ಸಚಿವ ಸಿ.ಸಿ.ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಅಝೆಂಡಾ ಈಸ್ ಢಿಪರೆಂಟ್. ಹೇಗಾದರು ಮಾಡಿ ಸಿಎಂ ಸಿದ್ದರಾಮಯ್ಯಗೆ ಅವರು ಒಳ್ಳೆಯವರು ಆಗಬೇಕು. ಆ ಮೂಲಕ ಸಂಪುಟ ಪುನರ್ ರಚನೆಯಲ್ಲಿ ಸಚಿವನಾಗಬೇಕು ಎನ್ನುವ ಅಝೆಂಡಾ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ, ಕಾಶಪ್ಪನವರ ಸಚಿವನಾದರೇ ಮೊದಲು ನಾವು ಸಂತೋಷ ಪಡುತ್ತೇವೆ. ನಾವೇ ಖುದ್ದಾಗಿ ಸಿಎಂ ಅವರನ್ನು ಭೇಟಿ ಆಗಿ ಮಂತ್ರಿ ಮಾಡಲು ಕೋರುತ್ತೇವೆ. ಆದರೇ ಸಮಾಜವನ್ನು ತುಳಿದು ಮಂತ್ರಿಯಾಗುವAತ ಉದ್ಯೋಗ ಮಾಡಬಾರದು. ನನ್ನ ಆದಿಯಾಗಿ ಸೂರ್ಯಚಂದ್ರ ಇರೋ ವರೆಗು ನಾವು ಅಽಕಾರದಲ್ಲಿ ಇರುತ್ತೇವೆ ಎನ್ನುವ ಭ್ರಮೆ ಇರಬಾರದು. ಜನ ಯಾರನ್ನು ಯಾವಾಗ ಎಲ್ಲಿ ಇಡಬೇಕೊ ಅಲ್ಲಿ ಇಡುತ್ತಾರೆ. ಜನ ಈ ಎಲ್ಲ ಬೆಳವಣೆ ಗಮನಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಕೂಡಲಸಂಗಮದ ಮಠದಲ್ಲಿ ಬೇರೆ ಸಮಾಜದವರನ್ನ ನೇಮಿಸಿ, ಪೋಟೋ ತೆಗೆಯುವುದಕ್ಕೆ ಕಳುಹಿಸುವುದು ಯಾವ ಜಗತ್ತಿನಲ್ಲಿ ಇಲ್ಲ. ಒಂದು ಪೀಠದಿಂದ ಸ್ವಾಮೀಜಿಯವನ್ನ ಹೊರ ಹಾಕುವಾಗ ಈ ರೀತಿ ಮಾಡುವುದು ಸರಿಯಲ್ಲ. ಅವರ ಪಕ್ಷದ ಹೈಕಮಾಂಡ ದಿಂದ ಕೂಡ ಯಾವುದೇ ನಿಯಂತ್ರಣವಿಲ್ಲ. ನಾವು ಎಲ್ಲರೂ ಹೋಗೂಣ ಸೇರೋಣ ಸಮಸ್ಯೆ ಬಗೆ ಹರಿಸಿಕೊಳ್ಳೋಣ ಅಂತ ವಿಚಾರ ಇದೆ. ಆದರೇ ಕಾಶಪ್ಪನವರ ಯಾರ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಮಂತ್ರಿಗಿರಿ ಪಡೆಯಲು ಈ ರೀತಿ ಅಝೆಂಡಾ ಇಟ್ಟುಕೊಂಡAತೆ ಕಾಣುತ್ತಿದೆ ಎಂದು ಟೀಕಿಸಿದರು.

ದೀಪ ಆರುವಾಗ ಉರಿದು ಆರುತ್ತದೆ. ಪಂಚಮಸಾಲಿ ಸಮಾಜದ ವತಿಯಿಂದ ಸ್ವಾಮೀಜಿಗಳಿಗೆ ಭರವಸೆ ಕೊಡುತ್ತೇವೆ. ನೆಮ್ಮದಿಯಾಗಿ ಸಮಾಜದ ಉತ್ಸುಕತೆಯಿಂದ ಕೆಲಸಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತೇವೆ. ಅದಕ್ಕೆ ಬೇಕಾಗುವ ಎ¯್ಲÁ ಸಹಾಯ ಮಾಡಲು ಪಂಚಮಸಾಲಿ ಸಮಾಜ ಸಿದ್ದವಾಗಿದೆ. ಕೂಡಲಸಂಗಮ ಪೀಠ ಯಾರಪ್ಪನ ಸ್ವತ್ತಲ್ಲ? ಇದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ವತ್ತು. ಈವತ್ತು ಇಲ್ಲಿ ಯಾರನ್ನು ಅಽಕಾರಕ್ಕೆ ಬರಕೊಡಲು ಬಿಡುವುದಿಲ್ಲ ಅಂತ ಹೇಳಬಹುದು. ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಿರಪರಾಽಗಳನ್ನು ಮೇಲೆ ಎ-À ಐ ಆರ್ ಮಾಡಿಸಿದ್ದಾರೆ. ಸಮಾಜ ಸಂಘಟನೆ ಮಾಡುವದಕ್ಕೆ ಸ್ವಾಮೀಜಿಗಳು ತೆಗೆದುಕೊಳ್ಳುವ ಎಲ್ಲ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಮೊದಲು ಶ್ರೀಗಳ ಆರೋಗ್ಯ ಸುಧಾರಿಸಲಿ, ಶ್ರಾವಣ ಮಾಸದಲ್ಲಿ ಸಭೆ ಸೇರಿ ಹಿರಿಯರು ನಿರ್ಧಾರ ಮಾಡುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net