

ಸಾಲಿಗ್ರಾಮ: ಕಾವೇರಿ ನದಿಗೆ ಮಿರ್ಲೆ ಗ್ರಾಮದ ಹುಣಸಮ್ಮ ದೇವಿ ಭಕ್ತರು ಮತ್ತು ರೈತ ಮುಖಂಡರು ಸೋಮವಾರ ಬಾಗಿನ ಅರ್ಪಿಸಿದರು.
ಮಿರ್ಲೆ ಗ್ರಾಮದೇವತೆ ಹುಣಸಮ್ಮ ದೇವಸ್ಥಾನದ ಮುಖ್ಯ ಅರ್ಚಕ ಕುಮಾರಸ್ವಾಮಿ ಮಾತನಾಡಿ, ಇತಿಹಾಸ ಪ್ರಸಿದ್ಧ ಕೃಷ್ಣರಾಜನಗರ ತಾಲೂಕಿಗೆ ಭತ್ತದ ಕಣಜ ಎಂದು ಹೆಸರು ಬರಲು ಕಾವೇರಿ ನದಿ ಇಲ್ಲಿ ಮೈದುಂಬಿ ಹರಿಯುವುದೇ ಕಾರಣ. ಪ್ರತಿ ವರ್ಷದಂತೆ ಈ ವರ್ಷವೂ ಮಿರ್ಲೆ ಗ್ರಾಮಸ್ಥರ ಸಹಯೋಗದೊಂದಿಗೆ ಬಾಗಿನ ಅರ್ಪಿಸಲಾಗಿದೆ ಎಂದರು.
ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಪುಟ್ಟಸ್ವಾಮಿಗೌಡ ನಾಗಮ್ಮ ಕುಟುಂಬದ ನಟರಾಜ್, ಯೋಗರಾಜ್, ತುಕಾರಾಂ, ಗ್ರಾಪಂ ಮಾಜಿ ಅಧ್ಯಕ್ಷ ವಿಶ್ವನಾಥ್, ಕೋದಂಡರಾಮ ದೇವಸ್ಥಾನದ ಸಮಿತಿ ಅಧ್ಯಕ್ಷ ಕೆಂಪೇಗೌಡ, ಗಣಪತಿ ದೇವಸ್ಥಾನದ ಅಧ್ಯಕ್ಷ ಜಯಂತ್, ಗ್ರಾಪಂ ಸದಸ್ಯೆ ಮಂಗಳಾ, ಸಿಇಟಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಧರಣಿ ಕುಮಾರ್, ಹುಣಸಮ್ಮ ದೇವಸ್ಥಾನದ ಧರ್ಮದರ್ಶಿ ಲೋಕೇಶ್, ನೇತ್ರಾವತಿ ಕುಮಾರಸ್ವಾಮಿ, ಮುಖಂಡರಾದ ಸುರೇಶ್, ಮೋಹನ್, ಎಂ.ಕೆ.ಸುಂದರೇಶ್, ನಟರಾಜ್, ಪ್ರಸನ್ನ, ಸರ್ವಮಂಗಳಾ, ಶೀಲಾ, ವೇದಾವತಿ, ಕವಿತಾ, ಭಾಗ್ಯಾ, ಶಾಂತಮ್ಮ, ಮಣಿಯಮ್ಮ, ರೈತ ಮುಖಂಡರು ಹಾಜರಿದ್ದರು.