ಕಾಲಮಿತಿಯೊಳಗೆ ಮುಂಬಡ್ತಿಗೆ ಕ್ರಮ ವಹಿಸಿ

bkt-8-3
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಽಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಧರಣಿ.
Published on

ಬಾಗಲಕೋಟೆ: ರಾಜ್ಯದ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಽಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾ ಆಡಳಿತ ಭವನದ ಎದುರು ಪ್ರತಿಭಟನಾ ಧರಣಿಯನ್ನು ಆರಂಭಿಸಿತು.

ಗ್ರೇಡ್-೧ ಕಾರ್ಯದರ್ಶಿಗಳ ವೃಂದದ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟಣೆ ಮಾಡಿ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡುವ ಬಗ್ಗೆ ಆಯುಕ್ತರಿಗೆ ಸರ್ಕಾರದ ನಿರ್ದೇಶನವಿದ್ದರೂ ಮುಂಬಡ್ತಿ ನೀಡದೆ ನಿರಾಸಕ್ತಿ ವಹಿಸುತ್ತಿರುವುದು ಸಾವಿರಕ್ಕೂ ಅಽಕ ವಿವಿಧ ವೃಂದದ ನೌಕರರು ಮುಂಬಡ್ತಿಯಿಂದ ವಂಚಿತರಾಗಿದ್ದು, ಕಾಲಮಿತಿಯೊಳಗೆ ಮುಂಬಡ್ತಿಗೆ ಕ್ರಮ ವಹಿಸಬೇಕಾಗಿದೆ. ಕಾರ್ಯದರ್ಶಿ ಗ್ರೇಡ್-೧ ವೃಂದದಿಂದ ಪಿಡಿಒ ವೃಂದಕ್ಕೆ ಈಗಿರುವ ಮುಂಬಡ್ತಿ ಅನುಪಾತವನ್ನು ಶೇಕಡ ೩೫ ರಿಂದ ೬೦ಕ್ಕೆ ಹೆಚ್ಚಿಸಬೇಕು. ೭ ವರ್ಷ ಒಂದೇ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಜಿಲ್ಲೆಯ ಬೇರೆ ತಾಲೂಕಿಗೆ ವರ್ಗಾಯಿಸುವ ಕರಡು ಅಽಸೂಚನೆಯನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಗ್ರೇಡ್-೨ ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್-೧ ಕಾರ್ಯದರ್ಶಿ ಹುದ್ದೆಗೆ ಕಳೆದ ೧೨ ರಿಂದ ೧೪ ವರ್ಷಗಳ ಕಾಲ ಬಡ್ತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದು, ಗ್ರೇಡ್-೨ ಕಾರ್ಯದರ್ಶಿಗಳಿಗೆ ನೇರ ನೇಮಕಾತಿ ಕೋಟಾದಡಿ ಒಂದು ಬಾರಿ ಏಕಕಾಲದಲ್ಲಿ ಬಡ್ತಿ ನೀಡುವುದು. ಗ್ರೇಡ್-೨ ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್-೧ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಶೇ.೩೩ ರಷ್ಟಿದ್ದು, ಅದನ್ನು ಶೇ.೮೦ಕ್ಕೆ ಹೆಚ್ಚಿಸಬೇಕು. ೫೦೦೦ ಕ್ಕಿಂತ ಹೆಚ್ಚಿಗೆ ಇರುವ ಗ್ರಾಮ ಪಂಚಾಯಿತಿಗಳನ್ನ ಗ್ರೇಡ್-೧ ಪಂಚಾಯಿತಿ ಅಂತಾ ಮೇಲ್ದರ್ಜೇಗೆ ಏರಿಸಬೇಕು ಎಂದು ಆಗ್ರಹಿಸಲಾಗಿದೆ.

ಮುಖಂಡರಾದ ಬಸವರಾಜ ಮುನ್ನೊಳ್ಳಿ, ಹಣಮಂತ ಕರ್ಣಕೋಟೆ, ಗಂಗಾಧರ ಹನಮಸಾಗರ, ಸಿದ್ಧಾರ್ಥ ಗೋಠೆ, ಎಸ್.ಪಿ.ಹಿರೇಮಠ, ಮಹಾಂತೇಶ ನಾಲತವಾಡ, ಎಲ್.ಜಿ.ಶಾಂತಗಿರಿ, ಜಿ.ಎಸ್.ಅರಳಿಕಟ್ಟಿ, ರಾಮಚಂದ್ರ ಮೇತ್ರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net