

ಕಲಬುರಗಿ: ಸಾಹಿತ್ಯದಲ್ಲಿ ಹಳತು, ಹೊಸತು ಎಂಬ ಭಾವವಿಲ್ಲ, ಆಯಾ ಕಾಲಘಟ್ಟಕ್ಕೆ ತಕ್ಕಂತೆ, ಸಮಾಜದ ಪರಿಸ್ಥಿತಿ, ವಾತಾವರಣಕ್ಕೆ ಅನುಗುಣವಾಗಿ ಹೊಸ ಪ್ರಕಾರ ಸೃಷ್ಟಿಯಾಗಿರುತ್ತದೆ. ಅಂದಿನದು ಹಳತು ಅಲ್ಲ, ಆಗಿನ ಕಾಲಘಟ್ಟಕ್ಕೆ ಅದೇ ಹೊಸತು. ಮನೋಭಾವ, ಬದುಕಿನ ಶೈಲಿ ಬದಲಾದಂತೆ ಜೀವನ ಬದಲಾವಣೆ ಆಗಿದೆ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಹೇಳಿದರು.
ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ `ಆಧುನಿಕ ಕನ್ನಡ ಕಾವ್ಯ ಧಾರೆಗಳು' ಕುರಿತ ಎರಡು ದಿನದ ರಾಷ್ಟಿçÃಯ ವಿಚಾರ ಸಂಕಿರಣಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಇಂಗ್ಲಿಷ್ ಪ್ರಭಾವ ಕನ್ನಡ ಸಾಹಿತ್ಯದ ಮೇಲೆ ಆಗಿದ್ದು, ಬೇರೆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಾಹಿತ್ಯದ ಅಭಿರುಚಿ ಬದಲಾಗಿದೆ. ಸಣ್ಣ ಕತೆ, ಕವನಗಳಿದ್ದರೇ ಬೃಹತ್ ಕಾದಂಬರಿ, ಗ್ರಂಥಗಳು ಇವೆ. ನಾವು ನಮ್ಮ ಅಸ್ಮಿತೆಯ ವಿಷಯಕ್ಕೆ ಸಾಹಿತ್ಯ ರಚಿಸುತ್ತಿz್ದೆÃವೆ. ಅಸ್ಮಿತೆಯನ್ನು ವಿರೋಧಿಸುವ, ನಿಯಂತ್ರಿಸುವ ಸಾಹಿತ್ಯ ಸೃಷ್ಟಿಯಾಗಬೇಕು ಎಂದು ಹೇಳಿದರು.
ಹೊಸ ಪೀಳಿಗೆಯ ಬರಹಗಾರರಲ್ಲಿ ಅಧ್ಯಯನ ಕೊರತೆ ಇದೆ. ಸಾಹಿತ್ಯತೇತರ ಬರಗಾರರಿದ್ದಾರೆ. ಫೇಸ್‌ಬುಕ್, ವಾಟ್ಸ್ಆ್ಯಪ್‌ನಲ್ಲಿ ಕವನ, ಕಥೆ ಬರೆಯುತ್ತಾರೆ. ಇದು ನಿಖರ, ಪ್ರಖರ, ಪ್ರತಿರೋಧಿ, ವಾಸ್ತವ ಮತ್ತು ಮುಕ್ತವಾಗಿ ಇರುತ್ತದೆ. ಸೋಷಿಯಲ್ ಮೀಡಿಯಾ ಪ್ರಭಾವ ಗಂಭೀರವಾಗಿ ಪರಿಗಣಿಸಬೇಕು. ಶೈಕ್ಷಣಿಕ, ಸಾಮಾಜಿಕ ಸ್ಥಿತಿಗೆ ತಕ್ಕಂತೆ ಸಾಹಿತ್ಯ ಸೃಷ್ಟಿಯಾಗಬೇಕು ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಎಂಎಲ್‌ಸಿ ಶಶೀಲ ನಮೋಶಿ ಮಾತನಾಡಿ, ಇಡೀ ವಿಶ್ವ ವೇಗವಾಗಿ ಬದಲಾವಣೆಯತ್ತ ಸಾಗಿದೆ. ಕೃತಕ ಬುದ್ಧಿಮತ್ತ (ಎಐ) ತಂತ್ರಜ್ಞಾನದಿAದ ಮೂರು ತಿಂಗಳಲ್ಲೇ ಮಹತ್ವದ ಬದಲಾವಣೆ ಆಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆ, ಉಪನ್ಯಾಸಕರು ಬದಲಾವಣೆಗೆ ಹೊಂದಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ಹೊಸ ಹೊಸ ಕೋರ್ಸ್ಗಳನ್ನು, ಬೋಧನಾ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಜಿ.ಡೊಳ್ಳೆಗೌಡರ್ ಮಾತನಾಡಿ, ಸಾಹಿತ್ಯ ವಿಮರ್ಶೆಗೆ ಒಳಗಾಗಬೇಕು. ಲೇಖಕನ ಜತೆ ವಿಮರ್ಶಕ ಇರಬೇಕು. ವಿಮರ್ಶಕ ಸಮಾಜ ಮತ್ತು ಲೇಖಕನ ಮಧ್ಯೆ ಸಂಪರ್ಕ ಕೊಂಡಿಯಾಗಿದ್ದು, ಲೇಖಕನ ಕರ್ತವ್ಯ ವಿಮರ್ಶಕ ಬಲ್ಲನು. ಸಾಹಿತ್ಯದ ಅತ್ಯಂತ ಸುಂದರ ಅಸ್ತçವಾಗಿದೆ. ಅದರ ಶಕ್ತಿ ಅಪಾರ. ಕಾವ್ಯು ಖುಷಿ ಪಡಿಸಬೇಕು. ಬದುಕು ಜೀವಿಸುವುದು ಕಲಿಸಬೇಕು ಎಂದರು.
ಕೇAದ್ರೀಯ ವಿವಿ ಶಾಸ್ತಿçÃಯ ಅಧ್ಯಯನ ವಿಭಾಗದ ನಿರ್ದೇಶಕ ಡಾ.ಬಿ.ಬಿ.ಪೂಜಾರ, ಹೈಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಅನೀಲ ಪಟ್ಟಣ, ಶರಣಬಸವ ವಿವಿ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ.ಕಲ್ಯಾಣರಾವ ಪಾಟೀಲ್, ಉಪಪ್ರಾಚಾರ್ಯೆ ಡಾ.ವೀಣಾ ಎಚ್ ಇತರರಿದ್ದರು. ಡಾ.ನಾಗೇಂದ್ರ ಮಸೂತಿ ಸ್ವಾಗತಿಸಿದರು. ಕವಿತಾ ಎ.ಎಂ.ನಿರೂಪಣೆ ಮಾಡಿದರು. ಡಾ.ಚನ್ನಮ್ಮ ಅಲ್ಬಾ ವಂದಿಸಿದರು.