ಕಾರ್ವಿುಕರ ಆರೋಗ್ಯ ತಪಾಸಣೆ

3KWR5
Published on

ಕಾರವಾರ : ಕರೊನಾ ಭೀತಿಯ ನಡುವೆ ಡೆಂಘೆ ಹಾವಳಿ ಶುರುವಾಗಿದೆ. ಬೈತಖೋಲ್ ಬಂದರಿನಲ್ಲಿ ದೋಣಿಯಲ್ಲಿದ್ದ ಒಡಿಶಾ ಮೂಲದ ಮೀನುಗಾರಿಕೆ ಕಾರ್ವಿುಕೊಬ್ಬನಿಗೆ ಡೆಂಘೆ ಇರುವುದು ಖಚಿತವಾಗಿದೆ.

ಕಳೆದ ಐದಾರು ದಿನದಿಂದ ದೋಣಿಯಲ್ಲೇ ಇದ್ದ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದೆ. ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರಮೇಶ ರಾವ್ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಶುಕ್ರವಾರ ಸ್ಥಳಕ್ಕೆ ತೆರಳಿ ಬಂದರಿನಲ್ಲಿ ದೋಣಿಯಲ್ಲಿ ವಾಸವಿರುವ ಎಲ್ಲ ಕಾರ್ವಿುಕರ ಜ್ವರದ ಪರೀಕ್ಷೆ ನಡೆಸಿದರು. ಪ್ರಯೋಗಾಲಯ ಸಿಬ್ಬಂದಿಯಿಂದ ಮಲೇರಿಯಾ ಸಮೀಕ್ಷೆ ಕೂಡ ನಡೆಸಲಾಗಿದೆ. ಅಲ್ಲದೆ, ನಗರಸಭೆಯಿಂದ ಬೈತಖೋಲ್ ಬಂದರು ಪ್ರದೇಶದಲ್ಲಿ ಧೂಮ್ರೀಕರಣ (ಫಾಗಿಂಗ್)ಮಾಡಲಾಗಿದೆ. ಹೆಚ್ಚಿನ ಜನರಿಗೆ ಹರಡದಂತೆ ಎಲ್ಲ ಕ್ರಮ ವಹಿಸಲಾಗುವುದು ಎಂದು ಡಾ.ರಮೇಶ ರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net