

ದಾಂಡೇಲಿ: ನಗರದ ಶ್ರೇಯಸ್ ಪೇಪರ ಮಿಲ್ನ ಕಾರ್ವಿುಕನೊಬ್ಬ ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನ ಹೊಂದಿದರು. ದಾಂಡೇಲಿ ನಗರ ಸಮೀಪದ ಗಾಂವಠಾಣಾದ ನಿವಾಸಿ ಚಂದ್ರಕಾಂತ ಸಿಂಧೆ (47) ಮೃತಪಟ್ಟ ಕಾರ್ವಿುಕ.
ನ್ಯಾಯಕ್ಕಾಗಿ ಸತ್ಯಾಗ್ರಹ: ಕಾರ್ವಿುಕನ ಅಕಾಲಿಕ ನಿಧನಕ್ಕೆ ಕಾರ್ಖಾನೆ ಹಳೇ ಮಾಲೀಕರೆ ಕಾರಣ ಎಂದು ಕಾರ್ವಿುಕ ಸೇವಾ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಆರೋಪಿಸಿದ್ದಾರೆ.
ಕಾರ್ವಿುಕನ ವೇತದಲ್ಲಿ ಕಡಿತಗೊಂಡಿರುವ ಎಲ್ಐಸಿ, ಪಿಎಫ್ ಹಾಗೂ ಇಎಸ್ಐಗಳನ್ನು ಕಾರ್ಖಾನೆ ಹಳೆಯ ಮಾಲೀಕರು ತುಂಬಿಲ್ಲ. ಹಾಗೂ ಕಳೆದ ಒಂದು ವರ್ಷದಿಂದ ಕಾರ್ಖಾನೆಗೆ ಬೀಗ ಮುದ್ರೆ ಹಾಕಿರುವುದರಿಂದ ಸಾಲದ ಸುಳಿಯಲ್ಲಿ ಸಿಲುಕಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಹೀಗಾಗಿ ಮೃತ ಕಾರ್ವಿುಕನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಾರ್ಖಾನೆಯ ಹಳೆಯ ಮಾಲೀಕರ ವಿರುದ್ಧ ಸತ್ಯಾಗ್ರಹ ಆರಂಭಿಸಿದ್ದಾರೆ. ತಹಸೀಲ್ದಾರ ಶೈಲೇಶ ಪರಮಾನಂದ ಸ್ಥಳಕ್ಕೆ ಆಗಮಿಸಿ, ಪ್ರಕರಣ ಕುರಿತು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳುವ ಭರವಸೆ ನೀಡಿದರು. ನಂತರ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ಮೃತನ ಅಂತ್ಯಕ್ರಿಯೆ ಮಾಡಲಾಯಿತು.</