ಕಾರ್‌ನಲ್ಲಿದ್ದ ೩೦ ಲಕ್ಷ ರೂ. ಜಪ್ತಿ

bkt-13-2
ಬಾಗಲಕೋಟೆಯ ಐಬಿ ಹತ್ತಿರ ವಶಕ್ಕೆ ಪಡೆದ ೩೦ ಲಕ್ಷ ರೂ.ಗಳ ನಗದು ಎಸಿ ಶ್ವೇತಾ ಬೀಡಿಕರ ಪರಿಶೀಲನೆ ನಡೆಸುತ್ತಿರುವುದು.
Published on

ಬಾಗಲಕೋಟೆ: ಬಾಗಲಕೋಟೆಯ ಐಬಿ ಹತ್ತಿರ ಫೋರ್ಡ್ ಪಿಗೋ ಕಂಪನಿಯ ಕಾರ್ ನಂ.ಕೆಎ-೪೮ ಎಂ-೮೮೨೧ ನಲ್ಲಿದ್ದ ೩೦ ಲಕ್ಷ ರೂ.ಗಳ ನಗದನ್ನು ಪರಿಶೀಲನೆ ವೇಳೆಯಲ್ಲಿ ಪೊಲೀಸ್‌ರು ವಶಪಡಿಸಿಕೊಂಡಿದ್ದಾರೆ.

ಸದರಿ ವಾಹನವನ್ನು ಪೊಲೀಸರು ಸಂಶಯಾಸ್ಪದವೆಂದು ತಿಳಿದು ಹಿಡಿದು ಪರಿಶೀಲಿಸಿದಾಗ ೩೦ ಲಕ್ಷ ರೂಪಾಯಿಯ ನಗದು ದೊರೆತಿರುತ್ತದೆ. ಈ ಹಣವು ಯೂನಿಯನ್ ಬ್ಯಾಂಕ್‌ನ ಇತರ ಬ್ರಾಂಚ್‌ಗಳಿಗೆ ನೀಡಲು ಸಾಗಿಸುತ್ತಿರುವುದಾಗಿ ವಾಹನ ಚಾಲಕ ತಿಳಿಸಿದ್ದು, ಚುನಾವಣಾ ಆಯೋಗದ ಕರ್ನಾಟಕ ಎಲೆಕ್ಷನ್ ಎಕ್ಸ್ಪೆಂಡಿಚರ್ ಮಾನಿಟರಿಂಗ್ ಆಪ್‌ನಲ್ಲಿ ಇದು ನಮೂದು ಆಗಿರುವುದಿಲ್ಲ. ಪ್ರಕರಣವನ್ನು ಜಿಲ್ಲಾ ಹಣಕಾಸು ಮುಟ್ಟುಗೋಲು ಸಮಿತಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಇವರಿಗೆ ಪರಿಶೀಲನೆಗಾಗಿ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net