ಕಾರ್ ಪಲ್ಟಿ ಹೊಡೆದು ಜಿಪಂ ನಿವೃತ್ತ ಕಾರ್ಯದರ್ಶಿ ಸೇರಿ ಇಬ್ಬರ ಸಾವು

IMG-20230622-WA0010
Published on

ಕಲಬುರಗಿ : ಸೇಡಂ ತಾಲೂಕಿನ ಮುಗುಟಾ ಬಳಿ ಕಾರ್ ಪಲ್ಡಿ ಹೊಡೆದು ಜಿಪಂ ನಿವೃತ್ತ ಕಾರ್ಯದರ್ಶಿ ಸೇರಿ ಇಬ್ಬರ ಸಾವು ಮೃತಪಟ್ಟ ಘಟನೆ ನಡೆದಿದೆ.

ಜಿಪಂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವಸಂತ ಕುಲಕರ್ಣಿ ಹಾಗೂ ಬ್ರಹ್ಮಪುರದ ರಾಮಾಚಾರ್ಯ ವೈಧ್ಯ ಅವರು ಮೃತಪಟ್ಟವರು. ಮೂವರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.

ವೈಯಕ್ತಿಕ ಕೆಲಸ ಸಲುವಾಗಿ ಕುಲಕರ್ಣಿ ಅವರು ಸೇಡಂಗೆ ಹೋಗಿದ್ದರು. ದೇವರ ಕಾರ್ಯಕ್ಕೆ ವೈದ್ಯ ಇತರರು ಹೋಗಿದ್ದರು. ಸೇಡಂನಿಂದ ಕಲಬುರಗಿ ಕಡೆಗೆ ಕಳೆದ ರಾತ್ರಿ ಬರುವಾಗ ಚಾಲಕ ನಿಯಂತ್ರಣ ತಪ್ಪಿ ಕಾರ್ ಮುಗುಟಾ ಬಳಿ ಪಲ್ಟಿ ಹೊಡದಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಐವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು. ಸೇಡಂ ಠಾಣೆಯದಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net