

ಕಲಬುರಗಿ: ತಾಲೂಕಿನ ಅವರಾದ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾದ ಘಟನೆ ಭಾನುವಾರ ನಡೆದಿದೆ. ನಗರದ ಮಿಜಗುರಿ ಪ್ರದೇಶದ ನಿವಾಸಿ ಅಜಮ್ ಮೃತ. ನಾಜಿಯಾ ಬೇಗಂ, ಅಯಾನ್, ಫರಿಯಾ ಮತ್ತು ಚಾಲಕ ಜಾವೀದ್ ಹುಸೇನ ಗಾಯಗೊಂಡವರು. ಮೃತ ಅಜಮ್ ಹಬ್ಬಕ್ಕೆ ಮನೆಗೆ ಬಂದಿದ್ದ ಪುತ್ರ ಅಯಾನ್‌ನನ್ನು ಕಾಲೇಜಿಗೆ ಬಿಟ್ಟು ಬರಲು ಬೀದರ್‌ಗೆ ಬಾಡಿಗೆ ಕಾರ್ ಪಡೆದು ಹೊರಟಿದ್ದಾಗ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಕಾರ್ ಪಲ್ಟಿಯಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರಿ ಪೊಲೀಸ್ ಠಾಣೆ (೨)ಯಲ್ಲಿ ಪ್ರಕರಣ ದಾಖಲಾಗಿದೆ.