

ಅಂಕೋಲಾ: ಕಾರು ಡಿಕ್ಕಿಯಾಗಿ ಪಾದಚಾರಿ ಯುವತಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಕೋಲಾ ಬಾಳೆಗುಳಿ ಸಮೀಪ ನಡೆದಿದೆ.
ಹಳೆ ಹುಬ್ಬಳ್ಳಿ ನೇಕಾರ ನಗರ ಮೂಲದ ಹಾಲಿ ಬಾಳೆಗುಳಿ ನಿವಾಸಿ ಸಾವಂತ್ರಿ ಸಂಜೀವಪ್ಪ ಗುಜಲೂರು(17)ಮೃತರು. ಈ ಅಪಘಾತದಲ್ಲಿ ಕಾರು ಮುಂದಿನ ಟ್ಯಾಂಕರ್‌ಗೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಚಾಲಕ ಕೇರಳ ಮೂಲದ ಹಾಲಿ ದಕ್ಷಿಣ ಗೋವಾ ಹೌಸಿಂಗ್ ಬೋರ್ಡ್ ಕಾಲನಿಯ ವಿಜಯ ಅಲೋಕನ್ ಹಾಗೂ ಅವರ ಪತ್ನಿ ಪ್ರೀತಾ ವಿಜಯನ್ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.