ಕಾರು ಪಲ್ಟಿಯಾಗಿ ಚಾಲಕ ಸಾವು

18 hkr 02
Published on

ಹಿರೇಕೆರೂರ: ಹರಿಹರ ರೇಲ್ವೆ ಹಳಿ ಸಮೀಪ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಪಟ್ಟಣದ ವಿದ್ಯಾನಗರದ ದೇವರಾಜ ಪರಮೇಶಪ್ಪ ಚಿಂದಿ (31) ಮೃತಪಟ್ಟ ಚಾಲಕ. ಸ್ವಂತ ಟ್ಯಾಕ್ಸಿ ಓಡಿಸುತ್ತಿದ್ದ ಇವರು, ದಾವಣಗೇರಿಗೆ ಬಾಡಿಗೆ ಹೋಗಿ ಮರಳಿ ಹಿರೇಕೆರೂರಿಗೆ ಬರುವಾಗ ಈ ಅವಘಡ ಸಂಭವಿಸಿದೆ. ಈ ಕುರಿತು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net