ಕಾರು, ಟಿಪ್ಪರ್ ನಡುವೆ ಡಿಕ್ಕಿ

17KMT1
Published on

ಕುಮಟಾ: ತಾಲೂಕಿನ ದಿವಗಿಯ ತಂಡ್ರಕುಳಿಯಲ್ಲಿ ಸೋಮವಾರ ಟಿಪ್ಪರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಸಿದ್ದಾಪುರ ಮೂಲದ ಮೂವರು ಹಾಗೂ ಕಾರು ಚಾಲಕ ಮನೋಹರ ಗೌಡ, ಟಿಪ್ಪರ್ ಚಾಲಕ ಬಾಡದ ನರೇಂದ್ರ ವಿಶ್ವನಾಥ ಪಟಗಾರ ಅವರಿಗೆ ಗಾಯಗಳಾಗಿವೆ. ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net