ಕಾರಿನ ಗಾಜು ಒಡೆದು ಹಣ ದೋಚಿದ್ದವನ ಸೆರೆ

1
ಆರೋಪಿಯಿಂದ ವಶಪಡಿಸಿಕೊಂಡಿರುವ ಹಣದೊಂದಿಗೆ ಪೊಲೀಸರು. ಪಿಎಸ್‌ಐ ವಿಜಿಕುಮಾರ್ ಮತ್ತು ಸಿಬ್ಬಂದಿಗಳಾದ ನಾರಾಯಣಸ್ವಾಮಿ ಪ್ರಕಾಶ್ ದೇವರಾಜ್, ಶಂಕರಪ್ಪ, ಮಂಜುನಾಥ್, ಲೋಕೇಶ್, ಸಂಪತ್ ಮತ್ತಿತರರು ಇದ್ದರು.
Published on

ಚಿಂತಾಮಣಿ ನಗರಠಾಣೆ ಪೊಲೀಸರ ಕಾರ್ಯಾಚರಣೆ - 1.80 ಲಕ್ಷ ರೂ. ವಶ

ಚಿಂತಾಮಣಿ: ಕಾರಿನ ಕಿಟಿಕಿ ಗಾಜು ಒಡೆದು 5 ಲಕ್ಷ ರೂ. ದೋಚಿದ್ದವನನ್ನು ನಗರಠಾಣೆ ಪೊಲೀಸರು ಬಂಧಿಸಿ, 1.80 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ಹೊಸಮನೆ ಸರ್ಕಲ್ ನಿವಾಸಿ ಸಂದೀಪ್ ಬಾಬು (19) ಬಂಧಿತ.

ತಾಲೂಕಿನ ಎಸ್.ರಾಗುಟ್ಟಹಳ್ಳಿಯ ಈರುಳ್ಳಿ ಕೃಷ್ಣಾರೆಡ್ಡಿ ಅವರು ಜುಲೈ 15ರಂದು ಕೋಳಿ ಫಾರಂ ಸಿಬ್ಬಂದಿಗೆ ಸಂಬಳ ನೀಡಲು ಬ್ಯಾಂಕ್‌ನಿಂದ 5 ಲಕ್ಷ ರೂ. ಡ್ರಾ ಮಾಡಿ ಕಾರಿನ ಸೀಟ್‌ನಲ್ಲಿಟ್ಟು, ದೇವಾಲಯಕ್ಕೆ ತೆರಳಿದ್ದ ವೇಳೆ ಕಿಟಕಿಯ ಗಾಜನ್ನು ಒಡೆದು ಹಣ ದೋಚಲಾಗಿತ್ತು. ಈ ಬಗ್ಗೆ ನಗರಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖೆಗಾಗಿ ಎಸ್‌ಪಿ ಕುಶಾಲ್‌ಚೌಕ್ಸೆ, ಎಎಸ್‌ಪಿ ರಾಜಾ ಇಮಾಮ್ ಖಾಸಿಂ ಹಾಗೂ ಡಿವೈಎಸ್‌ಪಿ ಮುರಳೀಧರ ಮಾರ್ಗ ದರ್ಶನದಲ್ಲಿ ಪಿಎಸ್‌ಐ ವಿಜಿಕುಮಾರ್ ನೇತೃತ್ವದಲ್ಲಿ ತಂಡ ರಚಿಸ ಲಾಗಿತ್ತು.ಕಾರ್ಯಾ ಚರಣೆಗಿಳಿದ ತಂಡ ಅ.11ರಂದು ಆರೋಪಿಯನ್ನು ಬಂಧಿಸಿದೆ. ತಂಡದಲ್ಲಿ ಪಿಎಸ್‌ಐಗಳಾದ ನಾರಾಯಣಸ್ವಾಮಿ, ಪ್ರಕಾಶ್, ಎಎಸ್‌ಐಗಳಾದ ದೇವರಾಜ್, ಶಂಕರಪ್ಪ, ಜಗದೀಶ, ಸಿಬ್ಬಂದಿಗಳಾದ ಮಂಜುನಾಥ, ಶ್ರೀನಿವಾಸಮೂರ್ತಿ, ಲೋಕೇಶ್, ಸಂಪತ್, ಸಿದ್ಧಾರೂಢ, ಮಲ್ಲಿಕಾರ್ಜುನ ಢವಳೇಶ್ವರ, ಸತೀಶ್ ಇದ್ದರು.

ಹಣ, ಒಡವೆ ದೋಚಿ ಮನೆಗೆ ಬೆಂಕಿ ಇಟ್ಟರುಗುಡಿಬಂಡೆ: ಪಟ್ಟಣದ 8ನೇ ವಾರ್ಡ್‌ನ ಕುಂಬಾರಪೇಟೆಯಲ್ಲಿ ಭಾನುವಾರ ರಾತ್ರಿ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬೀರುವಿನಲ್ಲಿದ್ದ ಹಣ, ಒಡವೆ ದೋಚಿ, ಸಾಕ್ಷ್ಯನಾಶಕ್ಕಾಗಿ ಮನೆಗೇ ಬೆಂಕಿ ಹಚ್ಚಿದ್ದಾರೆ. ಪಟ್ಟಣದ ಕೂಲಿ ಕಾರ್ಮಿಕ ಗೌಸ್ ಪೀರ್ ಎಂಬುವವರು ಬಾಡಿಗೆಗೆ ಇರುವ ಮನೆಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಕೆಲಸದ ನಿಮಿತ್ತ ಗೌಸ್‌ಪೀರ್ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ ಹಣ, ಆಭರಣ ದೋಚಿದ್ದಲ್ಲದೆ, ಬೆಡ್ ರೂಂನ ಬೀರು ಮತ್ತು ಮಂಚಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ಕಂಡ ನೆರೆಹೊರೆಯವರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಮನೆಯಿಂದ ಹೊಗೆ ಬರುತ್ತಿರುವುದಾಗಿ ಅಕ್ಕಪಕ್ಕದವರು ಕರೆ ಮಾಡಿ ತಿಳಿಸಿದರು. ಊರಲ್ಲಿ ಇಲ್ಲ ಎಂದು ತಿಳಿಸಿದೆ. ನಂತರ ಕೆಲ ಹುಡುಗರಿಗೆ ೆನ್ ಮಾಡಿ ಬೆಂಕಿ ಆರಿಸುವಂತೆ ತಿಳಿಸಿದೆ. ಮನೆಯಲ್ಲಿದ್ದ ಹಣ, ಒಡವೆ ಕದ್ದೊಯ್ದಿದ್ದಾರೆ. ಹಣ, ಬಟ್ಟೆ ಮತ್ತೆ ಕೆಲವು ದಾಖಲೆಗಳು ಸುಟ್ಟುಹೋಗಿವೆ ಎಂದು ಗೌಸ್‌ಪೀರ್ ದೂರಿನಲ್ಲಿ ತಿಳಿಸಿದ್ದಾರೆ. ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಟ್ಟೆ ಒಗೆದ ನೀರಿನ ವಿಚಾರಕ್ಕೆ ಜಗಳಚಿಂತಾಮಣಿ: ಸಾರ್ವಜನಿಕ ನಲ್ಲಿ ಬಳಿ ಬಟ್ಟೆ ಒಗೆದ ನೀರನ್ನು ಬಜಾರಿನಲ್ಲಿ ಹಾಯಿಸಿದ್ದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಚಿಲಕಲನೇರ್ಪು ಹೋಬಳಿ ಮರಬಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮಂಜುಳಾ (40) ಹಲ್ಲೆಗೊಳಗಾದ ಮಹಿಳೆ. ನಲ್ಲಿ ನೀರಿನಿಂದ ಬಟ್ಟೆ ಒಗೆದ ನೀರನ್ನು ಬಜಾರಿಗೆ ಹಾಯಿಸಿದ್ದು, ಆ ನೀರಿನಲ್ಲಿಯೇ ನಡೆದು ಮನೆಗೆ ಹೋಗಬೇಕಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮದ ನಿವಾಸಿ ಗಳಾದ ನಾರಾಯಣಸ್ವಾಮಿ, ಆತನ ಮಗ ನಾಗೇಶ್ ಮತ್ತು ನಾರಾಯಣಸ್ವಾಮಿ ಪತ್ನಿ ಯಾಮಕ್ಕ ಅವರು ನಮ್ಮ ಮನೆಯ ಬಳಿ ಬಂದು ಏಕಾಏಕಿ ಗಲಾಟೆ ಮಾಡಿ ನನ್ನ ಗಂಡ ಸುಬ್ಬರಾಯಪ್ಪ ಹಾಗೂ ಮೂರು ವರ್ಷದ ಪುತ್ರ ಅಂಜಿತ್ ಕುಮಾರ್ ಎದುರೇ ಹಲ್ಲೆ ನಡೆಸಿದ್ದಾರೆ ಎಂದು ಕೆಂಚಾರ‌್ಲಹಳ್ಳಿ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net