ಕಾರವಾರದಲ್ಲಿ ನಾಗರ ಪಂಚಮಿ ಸಂಭ್ರಮ

2KWR3A
Published on

ಕಾರವಾರ: ಜಿಲ್ಲಾದ್ಯಂತ ನಾಗರ ಪಂಚಮಿಯನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ನಾಗರ ಕಲ್ಲುಗಳಿಗೆ ಹಾಲು ಎರೆದು, ಕಾಯಿ ಒಡೆದು ಪೂಜೆ ಸಲ್ಲಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಕಾರವಾರದ ನಾಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಜನ ಆಗಮಿಸಿ ದೇವರಿಗೆ ಹರಕೆ ಒಪ್ಪಿಸಿದರು. ಮೃತಿಕೆ ಮಣ್ಣನ್ನು ಪ್ರಸಾದವಾಗಿ ಪಡೆದುಕೊಂಡರು. ಮನೆಗಳಲ್ಲಿ ಅರಿಶಿಣದ ಎಲೆಯಲ್ಲಿ ಕಡುಬು(ಪಾತೋಳಿ) ತಯಾರಿಸಿ ನೈವೇದ್ಯ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net