

ಕಾರವಾರ: ರಾಜ್ಯ ಹೆಲ್ತ್ ಬುಲೆಟಿನ್ ಮಾಹಿತಿಯಂತೆ ಜಿಲ್ಲೆಯಲ್ಲಿ 734 ಜನರಿಗೆ ಕೋವಿಡ್ ಸೋಂಕು ಇರುವುದು ಖಚಿತವಾಗಿದ್ದು, 6 ಜನ ಮೃತಪಟ್ಟಿದ್ದಾರೆ. 417 ಜನ ಗುಣವಾಗಿದ್ದಾರೆ. 4646 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಜಿಲ್ಲೆಯಲ್ಲಿ 23243 ಜನರಿಗೆ ಸೋಂಕು ತಗುಲಿದೆ.
ಶೇ. 75 ರಷ್ಟು ಜನರಿಗೆ ಕೋವಿಡ್ ಲಸಿಕೆ: ಜಿಲ್ಲೆಯಲ್ಲಿ 60 ವರ್ಷದ ಮೇಲಿನ ಒಟ್ಟು ಶೇ. 75 ರಷ್ಟು ಜನರಿಗೆ ಇದುವರೆಗೆ ಲಸಿಕೆ ನೀಡಲಾಗಿದೆ. ಇದುವರೆಗೆ 101024 ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, 25734 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 45 ವರ್ಷ ಮೇಲ್ಪಟ್ಟ ಶೇ. 35 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. 90163 ಜನ ಮೊದಲ ಡೋಸ್, 8657 ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
ಸಂಗ್ರಹಾಗಾರ: ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್ನಲ್ಲಿ 6 ಕೆಲ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಸಂಗ್ರಹಾಗಾರವನ್ನು ಹಾಗೂ 390 ಎಂಪಿ ಮೆಡಿಕಲ್ ಆಕ್ಸಿಜನ್ ಜನರೇಟರ್ ಘಟಕ ನಿರ್ವಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯಕ ತಿಳಿಸಿದ್ದಾರೆ. 29.27 ಲಕ್ಷ ರೂಪಾಯಿಗಳಲ್ಲಿ ಈ ಘಟಕವನ್ನು ಇನಾಕ್ಸ್ ಇಂಡಿಯಾ ಪ್ರೆ್ತ್ರವೇಟ್ ಲಿಮಿಟೆಡ್ನಿಂದ ನೇರವಾಗಿ ಸಂಗ್ರಹಿಸಲು ಕೆಪಿಟಿಟಿ ಕಾಯ್ದೆಯಲ್ಲಿ ವಿನಾಯಿತಿ ನೀಡಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಶೀಘ್ರದಲ್ಲಿ ಈ ಕಾಮಗಾರಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.