

ಬಾಗಲಕೋಟೆ: ಭಾರತವು ಮುಸ್ಲಿಂ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟು ಸಂಕಷ್ಟದಲ್ಲಿತ್ತು. ಹಿಂದೂಗಳು ತೀವ್ರ ಸಮಸ್ಯೆಯಲ್ಲಿ ಸಿಲುಕಿದ್ದರು. ತಾಯಿ ಜೀಜಾಬಾಯಿ ಮಾತಿನಂತೆ ಛತ್ರಪತಿ ಶಿವಾಜಿ ಮಹಾರಾಜ ಹಿಂದವೀ ಸೇನೆ ಮೂಲಕ ಹಿಂದು ಸಮಾಜವನ್ನು ಮತ್ತೆ ಸ್ಥಾಪಿಸಿದರು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.
ನಗರದ ಹೊಳೇ ಆಂಜನೇಯ ದೇವಸ್ಥಾನ ಆವರಣದಲ್ಲಿ ಭಾನುವಾರ ಬೆಳಗ್ಗೆ ಸಕಲ ಹಿಂದು ಸಮಾಜ, ಮರಾಠ ಹಿತ ಚಿಂತಕ ಸಂಘ ಜಿಲ್ಲಾ ಘಟಕ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹರಾಜ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಶಿವಾಜಿ ಮಹರಾಜ ೪೦೦ ವರ್ಷಗಳ ಹಿಂದೆ ಜನ್ಮ ತಾಳದೇ ಹೋದರೇ ಇಂದು ಕೇಸರಿ, ಕುಂಕುಮ, ವಿಭೂತಿ ಏನು ಇರುತ್ತಿರಲಿಲ್ಲ. ೧೬ ನೇ ವಯಸ್ಸಿಗೆ ಸೇನೆ ಕಟ್ಟಿದ ಧೀಮಂತ ಹೋರಾಟಗಾರ. ಗೋ ಹತ್ಯೆ ವಿರುದ್ಧ ರಣಕಹಳೆ ಮೊಳಗಿಸಿದ. ಬರೋಬ್ಬರಿ ೪೦೦ ಕೋಟೆ ವಶಕ್ಕೆ ಪಡೆದು ದೇಶದಲ್ಲಿ ಹಿಂದವೀ ಸಾಮಾಜ್ಯ ಸ್ಥಾಪನೆ ಮಾಡಿದ್ದ. ತನ್ನ ಬಲಗೈ ಬಂಟ ತಾನಾಜಿ ತೀರಿಕೊಂಡಾಗ ಕಣ್ಣೀರಿಟ್ಟ ಶಿವಾಜಿ ಅಂಬಾಭವಾನಿ, ಕಾಮದೇನು (ಆಕಳು) ಭಕ್ತನಾಗಿದ್ದ. ಮೋಸ ಮಾಡಲು ಬಂದಿದ್ದ ಅಫ್ಝಲ್ ಖಾನ್‌ಗೆ ತಕ್ಕ ಪಾಠ ಕಲಿಸಿದ್ದ ಎಂದರು.
ಇಂದು ನಮ್ಮ ರಾಷ್ಟ್ರೀಯ ಚಿಂತಕರೊಬ್ಬರು ಮುಸ್ಲಿಂರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ ಅಂತಾರೆ. ಈ ಹಿಂದೆ ಶಿವಾಜಿ ಹೊಂದಾಣಿಕೆ ಮಾಡಿಕೊಂಡಿದ್ದರೇ ಪರಿಸ್ಥಿತಿ ಏನಾಗುತ್ತಿತ್ತು, ಊಹಿಸಲು ಸಾಧ್ಯವಿಲ್ಲ. ನಮ್ಮ ದೇಶದ ಸಂವಿಧಾನ, ಕಾನೂನು ಒಪ್ಪದವರ ಜೊತೆಗೆ ಹೊಂದಾಣಿಕೆ ಅಸಾಧ್ಯವಾದ ಮಾತು ಎಂದು ಖಾರವಾಗಿ ನುಡಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದರು ಗೋವುಗಳ ಹತ್ಯೆ ನಿಲ್ಲುತ್ತಿಲ್ಲ. ಸುಪ್ರೀಂಕೋರ್ಟ ಆದೇಶವಿದ್ದರು ಮಸೀದಿಗಳ ಮೇಲೆ ಮೈಕ್, ಲೌಡ್ ಸ್ಪೀಕರ ತೆಗೆಯುತ್ತಿಲ್ಲ. ಕೇವಲ ಹಿಂದೂಗಳಿಗೆ ಮಾತ್ರ ಕಾನೂನು ಇದೇಯಾ? ಹಿಜಾಬ್, ಹಲಾಲ್ ಅಂತ ಕುಳಿತರೇ ಸಹಿಸಲು ಆಗುವದಿಲ್ಲ. ಶಿವಾಜಿ ಕೊಟ್ಟ ಸಂದೇಶದಡಿ ಹಿಂದೂ ಸಮಾಜ ನಿರ್ಮಿಸಬೇಕು. ಅಂಬಾನಿ, ಅದಾನಿ ಆಗದ್ದು ಶಿವಾಜಿ ಮಾಡಿದ್ದರು. ಲವ್ ಜಿಹಾದ್ ನಡೆಯುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು. ನಮ್ಮ ಯುವಕರು ಇದಕ್ಕೆ ಪ್ರತಿಕಾರ ತೀರಿಸಬೇಕು. ಹಿಂದೂ ಸಮಾಜದ ಯುವಕರು ದಿಟ್ಟ ಹೆಜ್ಜೆ ಈಡಿ, ಅವರ ಜವಾಬ್ದಾರಿ ಶ್ರೀರಾಮ ಸೇನೆ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಹಿಂದು ಸಂಘಟನೆಗಳಿಗೆ ಬಲ ತುಂಬಿ:
ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕೇವಲ ಕಾನೂನು ಮಾಡಿದರೇ ಸಾಲದು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆಗಳು ದಿಟ್ಟ ಕ್ರಮ ತೆಗೆದುಕೊಳ್ಳುತ್ತವೆ. ಹಿಂದು ಸಂಘಟನೆಗಳಿಗೆ ಬಲ ತುಂಬಿ. ನನ್ನ ಮೇಲೆ ೧೦೯ ಪ್ರಕರಣ ಇವೆ. ೨೦ ಜಿಲ್ಲೆಗಳಿಂದ ಗಡಿಪಾರು ಮಾಡಲಾಗಿದೆ. ಇದು ಬೇರೆ ಯಾವ ಸರ್ಕಾರ ಮಾಡಿಲ್ಲ. ಬಿಜೆಪಿವರು ಮಾಡಿದ್ದು, ಆದರು ನಾನು ಇನ್ನು ನಾಟ್‌ಔಟ್ ಆಗಿದ್ದೇನೆ. ಪ್ರತಿಯೊಬ್ಬರ ಮನೆಯಲ್ಲಿ ಆಯುಧ ಇರಬೇಕು. ಅದು ನಮ್ಮ ಸಂಪ್ರದಾಯ. ನಮ್ಮ ದುರ್ಗಾದೇವಿ, ಹನುಮಂತ ದೇವರು, ಈಶ್ವರ ಕೈಯಲ್ಲಿ ಆಯುಧ ಇದೆ. ಮೊದಲು ಈ ದೇವರುಗಳನ್ನು ಪೊಲೀಸರು ಬಂಧನ ಮಾಡಲಿ. ನಂತರ ನಮ್ಮ ಮೇಲೆ ಕೇಸ್ ಹಾಕಿ ಅಂತ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜ ಕೇವಲ ಮರಾಠ ಸಮುದಾಯಕ್ಕೆ ಸಿಮೀತವಲ್ಲ. ಸಕಲ ಹಿಂದೂ ಸಮಾಜದ ಮಹಾನ್ ನಾಯಕರು. ಶಿವಾಜಿ ಅವರನ್ನು ಜಾತಿಯಿಂದ ಯಾರು ಗುರುತಿಸಬಾರದು. ತಮ್ಮ ಆಡಳಿತ ಅವಽಯಲ್ಲಿ ಖಾಜಿ, ಮುಲ್ಲಾಗಳನ್ನು ಗಲ್ಲಿಗೆ ಏರಿಸಲಿಲ್ಲ. ಧರ್ಮ ಸಹಿಷ್ಣು ಆಗಿದ್ದರು. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಿದ್ದರು ಎಂದು ಹೇಳಿದರು.
ಮರಾಠ ಹಿತ ಚಿಂತಕ ಸಂಘದ ಜಿಲ್ಲಾಧ್ಯಕ್ಷ ಡಾ.ಶೇಖರ ಮಾನೆ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಡಾ.ಗಿರೀಶ ಮಾಸೂರಕರ, ರಮೇಶ ಬದ್ನೂರ, ಮೋಹನ ನಾಡಗೌಡ, ಕಲ್ಪನಾ ಸಾವಂತ ಸೇರಿದಂತೆ ಇತರರು ಇದ್ದರು.