ಕಾಯಕದ ಬೆಳಕು ಬೆಳಗಿಸಿದ್ದು ವಿಶ್ವೇಶ್ವರಯ್ಯ

bkt-17-6
ಬಾಗಲಕೋಟೆ ನಗರದ ಕಸಾಪ ಸಭಾಭವನದಲ್ಲಿ ಕಸಾಪ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಸಮಾರಂಭ ಜರುಗಿತು.
Published on

ಬಾಗಲಕೋಟೆ: ಕನ್ನಡಿಗರ ಕಾಯಕದ ಬೆಳಕನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ ಕೀರ್ತಿ ವಿಶ್ವೇಶ್ವರಯ್ಯನವರಾಗಿದೆ, ದೇಶದ ಅಭಿವೃದ್ಧಿಗೆ ಅಭಿಯಂತರರ ಕೊಡುಗೆ ಅಪಾರವಿದೆ ಎಂದು ಬಿಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಹೇಳಿದರು.

ನಗರದ ಕಸಾಪ ಸಭಾಭವನದಲ್ಲಿ ಕಸಾಪ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ನಾಡಿನ ಅಭಿವೃದ್ಧಿಯ ಚಿಂತನೆಗಳ ಹಿಂದಿರುವ ಪ್ರೇರಕಶಕ್ತಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರಾಗಿದ್ದು, ಶತಮಾನ ಕಂಡ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕಾರಣಿಕರ್ತರಾಗಿ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸರ್.ಎಂ ವಿಶ್ವೇಶ್ವರಯ್ಯನವರು ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದವರಾಗಿದ್ದರು ಎಂದರು.

ಕನ್ನಡ ನಾಡಿಗಾಗಿ, ದೇಶಕ್ಕಾಗಿ ಸೇವೆ ಸಲ್ಲಿಸಿ, ಇಂದಿನ ವಿಜ್ಞಾನಿಗಳಿಗೆ, ಅಭಿಯಂತರಿಗೆ ಸ್ಪೂರ್ತಿ ತುಂಬಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆಯ ಜಿಲ್ಲಾ ಘಟಕ ಇಂದು ಅವರ ಜನ್ಮದಿನಾಚರಣೆಯಂದು ಸಾಧನೆಗೈದ ಅಭಿಯಂತ್ರರರನ್ನು ಸನ್ಮಾನಿಸ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಜೀವನ ಪೂರ್ತಿ ಕನ್ನಡ ನಾಡಿಗಾಗಿ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲೆದ ಹೆಮ್ಮೆಯ ವಿಜ್ಞಾನಿಯಾಗಿ ಜಗತ್ಪ್ರಸಿದ್ಧರಾಗಿದ್ದಾರೆ. ಇಂದು ಕನ್ನಡದ ನೆಲವು ವಿಜ್ಞಾನ, ತಂತ್ರಜ್ಞಾನದ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾದ ಪರಿಶ್ರಮ, ದೂರದೃಷ್ಠಿ, ಸಮಾಜಮುಖಿ ಯೋಜನೆಗಳು ಅವರ ಪ್ರತಿಭೆಗೆ ಸಾಕ್ಷಿಯಾಗಿವೆ. ಕನ್ನಡ ಕನ್ನಂಬಾಡಿ ಆಣೆಕಟ್ಟು ಕಟ್ಟಿದ್ದು, ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

ಕಾರ್ಯನಿರ್ವಾಹಕ ಅಭಿಯಂತರ ಎನ್.ಎನ್.ಪಾಟೀಲ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಎಂ.ಟಿ.ಮೇಟಿ ಮಾತನಾಡಿದರು. ಸಾಹಿತಿ ಯೋಗೇಶ್ ಲಮಾಣಿ, ಪ್ರಭಾರ ಅಽÃಕ್ಷಕ ಅಭಿಯಂತರ ಶ್ರೀಶೈಲ ಕಲ್ಯಾಣಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿರುಪಾಕ್ಷಯ್ಯ ಚೌಕಿಮಠ, ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ, ಶಂಕರ ಹೂಲಿ, ಡಾ.ಗೀತಾ ದಾನಶೆಟ್ಟಿ, ವಿಜಯಶ್ರೀ ಮುರನಾಳ, ಸಂಗಮೇಶ ಬ್ಯಾಳಿ, ಸಂಗಮೇಶ ಬಡಿಗೇರಿ ಇತರರು ಇದ್ದರು. ಪವಿತ್ರಾ ಜಕ್ಕಪ್ಪನವರ ಪ್ರಾರ್ಥಿಸಿದರು. ಸಂಗಮೇಶ ಪಾನಶೆಟ್ಟಿ, ಬಸವರಾಜ ಕುಬಸದ ನಾಡಗೀತೆ ಹಾಡಿದರು. ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಆರ್.ಸಿ.ಚಿತ್ತವಾಡಿಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net