

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಜನನಿ ಆಸ್ಪತ್ರೆ ಸಮೀಪವಿರುವ ಮೋದಿ ಟೀ ಸ್ಟಾಲ್ ಬಳಿ ಮಂಗಳವಾರ ಡಾ.ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ ಆಚರಿಸಲಾಯಿತು.
ಕೊಳ್ಳೇಗಾಲ ಪಟ್ಟದ ಮಠದ ಮಹದೇವ ಸ್ವಾಮೀಜಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಿದ್ಧಗಂಗಾ ಶ್ರೀಗಳು ತ್ರಿವಿಧ ದಾಸೋಹಿಗಳಾಗಿದ್ದವರು. ಅವರ ಆದರ್ಶ, ಧರ್ಮ ನಿಷ್ಠೆ, ಕಾಯಕ ನಿಷ್ಠೆಯನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಬಸವರಾಜು ಬಸಪ್ಪನದೊಡ್ಡಿ, ತಾಲೂಕು ಉಪಾಧ್ಯಕ್ಷ ತಿಮ್ಮರಾಜೀಪುರ ರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಧುವನಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಅಪ್ಪು ಟೀಂ ರಾಜೇಶ್, ಅಚ್ಗಾಳ್ ಮಹದೇವಸ್ವಾಮಿ ಮತ್ತಿತರಿದ್ದರು.