ಕಾಮನ್ ಕೆಡರ್ ಪ್ರಾಧಿಕಾರ ರಚನೆ ಮಾಡಿ

bkt-31-3
ಬೆಳಗಾವಿಯ ಸುವರ್ಣಸೌಧದಲ್ಲಿ ಸಹಕಾರಿ ಸಚಿವ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೋಮವಾರ ಭೇಟಿ ಮಾಡಿ ಸನ್ಮಾನಿಸಿದರು.
Published on

ಬಾಗಲಕೋಟೆ: ಬೆಳಗಾವಿಯ ಸುವರ್ಣಸೌಧದಲ್ಲಿ ಸಹಕಾರಿ ಸಚಿವ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೋಮವಾರ ಭೇಟಿ ಮಾಡಿ ಸಹಕಾರಿ ಕ್ಷೇತ್ರದ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಸಹಕಾರಿ ಸಂಘಗಳ ಸಿಬ್ಬಂದಿಗಳ ವೇತನದ ಸಲುವಾಗಿ ಕಾಮನ್ ಕೆಡರ್ ಪ್ರಾಧಿಕಾರ ರಚನೆ ಮಾಡಬೇಕು ಹಾಗೂ ಅವರ ವೇತನ ಡಿ.ಸಿ.ಸಿ ಬ್ಯಾಂಕಿನಿಂದ ಬಟವಡೆಯಾಗಬೇಕು. ಸಹಕಾರಿ ಬ್ಯಾಂಕುಗಳ ನಿರ್ದೇಶಕ ಮಂಡಳಿಯ ಚುನಾವಣೆಗೆ ಸಂಬಂಽಸಿದಂತೆ ಚುನಾವಣಾ ಪ್ರಚಾರಕ್ಕಾಗಿ ಕೇವಲ ಮೂರು ದಿವಸ ಇರುತ್ತದೆ. ಸಹಕಾರಿ ಸಂಘ ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಸದಸ್ಯರ ಸಂಖ್ಯೆ ಬಹಳ ಇರುವದರಿಂದ ಹಾಗೂ ಕಾರ್ಯಕ್ಷೇತ್ರ ೫-೬ ಜಿಲ್ಲೆಗಳು ಇರುವುದರಿಂದ ನಿದೇಶಕ ಮಂಡಳಿಯ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ ಕನಿಷ್ಠ ೭ ದಿವಸ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣ ಸಹಕಾರಿ, ಡಿ.ಸಿ.ಸಿ ಬ್ಯಾಂಕುಗಳು ಸಣ್ಣ ರೈತರಿಗೆ,ವ್ಯಾಪಾರಸ್ತರಿಗೆ ಹಣಕಾಸಿನ ಸೌಲಭ್ಯಗಳನ್ನು ಕೊಡುತ್ತವೆ. ಆದಕಾರಣ ಸರ್ಕಾರದ ಹಣವನ್ನು ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಕರೆಂಟ ಖಾತೆಯಲ್ಲಿ ಇಡುವ ಬದಲು ಸಹಕಾರಿ ಬ್ಯಾಂಕುಗಳಲ್ಲಿ ತೊಡಗಿಸಲು ವಿನಂತಿಸಿದೆ. ಸಹಕಾರಿ ಸಂಘಗಳ ನೋಂದಣಿ ದಿನೇ ದಿನೇ ಹೆಚ್ಚಾಗಿ ಅದಕ್ಕಾಗಿ ಸಹಕಾರಿ ಸಂಘಗಳ ಇಲಾಖೆಯಲ್ಲಿ ಅದಕ್ಕೆ ತಕ್ಕಂತೆ ಸಿಬ್ಬಂದಿ ಹೆಚ್ಚಿಸಿ ಅವರ ವರ್ಕಲೋಡ್ ಕಡಿಮೆ ಮಾಡಬೇಕು.

ಸಹಕಾರಿ ಬ್ಯಾಂಕುಗಳ ಮೇಲೆ ಆರ್.ಬಿ.ಐ ದವರು ಕಠಿಣ ಕ್ರಮ ಜರುಗಿಸುತ್ತಾರೆ. ಆದರೆ ಬೇರೆ ಯಾವದೇ ನ್ಯಾಷನಲ್ ಅಥವಾ ಕಮರ್ಷಿಯಲ್ ಬ್ಯಾಂಕ ನಷ್ಟದಲ್ಲಿ ಬಂದಾಗ ಸರ್ಕಾರ ಅವರ ಸಹಾಯಕ್ಕೆ ಬರುವಂತೆ, ನಮ್ಮ ಸಹಕಾರಿ ಬ್ಯಾಂಕುಗಳಿಗೂ ಸಹಾಯ ಮಾಡಬೇಕು. ಬ್ಯಾಂಕಿನ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಮೇಲೆ ಸುಳ್ಳು ಆರೋಪದ ಮೂಕ ಅರ್ಜಿ ಬರುತ್ತಿವೆ. ಆದ್ದರಿಂದ ಅವರ ಮನೋಸ್ಥರ್ಯ ಕುಂದುತ್ತಿದೆ. ಮೂಕ ಅರ್ಜಿಗಳಿಗೆ ಹೆಸರು ಇರುವದಿಲ್ಲ, ಅದರಲ್ಲಿ ಸತ್ಯಾಂಶ ಕೂಡಾ ಇರದೇ ಇರುವದರಿಂದ ಮೂಕ ಅರ್ಜಿಗಳನ್ನು ಮಾನ್ಯ ಮಾಡಬಾರದು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಸವೇಶ್ವರ ಬ್ಯಾಂಕ್ ನಿರ್ದೇಶಕ ಶ್ರೀನಿವಾಸ ಬಳ್ಳಾರಿ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾಶನಾಥ ಹುಡೇದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net