ಕಾತರಕಿ-ಕಲಾದಗಿ ಸೇತುವೆ ಸಂಪರ್ಕ ಕಡಿತ

bkt-30-5
ಲಾದಗಿ-ಕಾತರಕಿ ಬ್ರೀಡ್ಜ ಕಂ ಬ್ಯಾರೇಜ್ ಸೇತುವೆ ಸುತ್ತಲು ನೀರು ಆವರಿಸಿರುವುದು.
Published on

ಬಾಗಲಕೋಟೆ: ಮಂಗಳವಾರವು ಪ್ರವಾಹ ಆರ್ಭಟ ಮುಂದು ವರೆದ ಪರಿಣಾಮ ಬೀಳಗಿ, ಬಾಗಲಕೋಟೆ, ಮುಧೋಳ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಕಲಾದಗಿ-ಅಂಕಲಗಿ(ಕಾತರಕಿ) ಬ್ರೀಡ್ಜ ಕಂ ಬ್ಯಾರೇಜ್ ಸುತ್ತಲು ನೀರು ಆವರಿಸಿ ಸಂಪರ್ಕ ಕಂಡಿತಗೊಂಡಿತು.

ಸೋಮವಾರ ಸಂಜೆ ವರೆಗೂ ಸಂಚಾರಕ್ಕೆ ತೊಂದರೆ ಇರಲಿಲ್ಲ. ಮಂಗಳವಾರ ಬೆಳಗ್ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಬ್ರಿಡ್ಜ ಕಂ ಬ್ಯಾರೇಜ ಸೇತುವೆ ಸಂಚಾರ ಬಂದ ಆಯಿತು. ಕಾತರಕಿ, ಆಲಗುಂಡಿ, ಕುಂದರಗಿ, ಅರಕೇರಿ ಭಾಗದ ೨೦ ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿತು. ಈ ಗ್ರಾಮಗಳಿಗೆ ತೆರಳುವವರು ೧೫ ಕಿ.ಮೀ ಸುತ್ತುವರೆದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಂಚಾರ ಬಂದ್ ಹಿನ್ನೆಲೆಯಲ್ಲಿ ಶಾಲಾ, ಕಾಲೇಜು ತೆರಳುವ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಯಿತು. ನದಿ ಉಕ್ಕಿ ಹರಿಯುತ್ತಿದ್ದರು ಸಹ ವಾಹನ ಸವಾರರ ಚಲ್ಲಾಟ ಮಾತ್ರ ಆಕ್ರೋಶಕ್ಕೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net