ಕಾಡುಪ್ರಾಣಿ ದಾಳಿಗೆ ಹಸು ಬಲಿ

25 HANUR 5
Published on

ಹನೂರು: ತಾಲೂಕಿನ ಕಂಡಯ್ಯನಪಾಳ್ಯದಲ್ಲಿ ಸೋಮವಾರ ರಾತ್ರಿ ಕಾಡುಪ್ರಾಣಿಗಳ ದಾಳಿಗೆ ಹಸು ಬಲಿಯಾಗಿದೆ.

ಗ್ರಾಮದ ಕೃಷ್ಣ ಅವರು ತಮ್ಮ ಕೊಟ್ಟಿಗೆಯಲ್ಲಿ ಹಸು ಕಟ್ಟಿ ಹಾಕಿದ್ದರು. ತಡರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಚಿರತೆ ಇಲ್ಲವೆ ಹುಲಿ ಕೊಟ್ಟಿಗೆಗೆ ದಾಳಿ ಇಟ್ಟು ಹಸುವನ್ನು ಬಲಿ ಪಡೆದಿದೆ. ಅಲ್ಲದೆ ಕೊಟ್ಟಿಗೆಯಿಂದ 100 ಮೀಟರ್‌ವರೆಗೆ ಹಸುವಿನ ಕಳೇಬರವನ್ನು ಎಳೆದೊಯ್ಯಲು ಯತ್ನಿಸಿ ಸಾಧ್ಯವಾದೆ ಕಾಡಿನತ್ತ ತೆರಳಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತ ಕೃಷ್ಣ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net