ಕಾಡು ಹಂದಿ ದಾಳಿಗೆ ಅಡಕೆ ತೋಟ ನಾಶ

19sdp2a
Published on

ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಗೊದ್ಲಬೀಳ ಹಾಗೂ ಹೀನಗಾರ ಗ್ರಾಮದ ಅಡಕೆ ತೋಟಕ್ಕೆ ಕಾಡು ಹಂದಿ ದಾಳಿ ನಡೆಸಿ ಅಡಕೆ ಸಸಿ ಹಾಗೂ ಬಾಳೆ ಗಿಡಗಳನ್ನು ನಾಶಪಡಿಸಿವೆ.

ಸುಬ್ರಹ್ಮಣ್ಯ ಭಟ್ಟ ಗೊದ್ಲಬೀಳ, ಗಣಪತಿ ಹೆಗಡೆ, ಗಾಯತ್ರಿ ದೀಕ್ಷಿತ್, ಮಂಜುನಾಥ ಹೆಗಡೆ, ಲಕ್ಷ್ಮೀಶ ಹೆಗಡೆ ಗೊಳಿಕೈ, ರಾಮಕೃಷ್ಣ ಹೆಗಡೆ ಗೊಳಿಕೈ, ಮಹಾಬಲೇಶ್ವರ ಹೆಗಡೆ ಹಳದೋಟ, ಗೋಪಾಲ ಹೆಗಡೆ ಹೀನಗಾರ, ಉಮಾಕಾಂತ ಹೆಗಡೆ ಹೀನಗಾರ ಸೇರಿ ಮತ್ತಿತರ ಅಡಕೆ ಬೆಳೆಗಾರರ ತೋಟಕ್ಕೆ ಕಾಡು ಹಂದಿಗಳು ದಾಳಿ ನಡೆಸಿ 500ಕ್ಕೂ ಹೆಚ್ಚು ಅಡಕೆ, ಬಾಳೆ ಗಿಡಗಳನ್ನು ನಾಶಪಡಿಸಿವೆ.

ಅಡಕೆ ಸಸಿ, ಬಾಳೆಗಿಡ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಯುವುದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರು ಸ್ಥಳಕ್ಕೆ ಭೇಟಿ ನೀಡಿದ ನಿಡಗೋಡ ಉಪವಲಯ ಅರಣ್ಯಾಧಿಕಾರಿ ವಿನಾಯಕ ಎಂ. ಅವರನ್ನು ಆಗ್ರಹಿಸಿದರು.

ಹೀನಗಾರ-ಗೊದ್ಲಬೀಳ ಗ್ರಾಮದಲ್ಲಿ ಕಾಡುಹಂದಿಗಳು ಅಡಕೆ ತೋಟಕ್ಕೆ ದಾಳಿ ನಡೆಸಿ ಬೆಳೆ ನಾಶಪಡಿಸಿದ್ದನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ಕುರಿತು ಬೆಳೆಗಾರರು ಇಲಾಖೆಗೆ ಅರ್ಜಿ ಸಲ್ಲಿಸಬೇಕು.| ವಿನಾಯಕ ಎಂ., ಉಪವಲಯ ಅರಣ್ಯಾಧಿಕಾರಿ, ನಿಡಗೋಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net