ಕಾಡಾನೆ ದಾಳಿಗೆ ಬೆಳೆ ಹಾಳು

16 YLP 01
Published on

ಯಲ್ಲಾಪುರ: ತಾಲೂಕಿನ ಕಿರವತ್ತಿ, ಮದನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ.

ಮದನೂರು ಗ್ರಾ.ಪಂ. ವ್ಯಾಪ್ತಿಯ ಮಾದೇವಕೊಪ್ಪದಲ್ಲಿ ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಾದೇವಕೊಪ್ಪದ ಗೋಪಾಲಕೃಷ್ಣ ಗಾಂವ್ಕಾರ ಅವರಿಗೆ ಸೇರಿದ ಭತ್ತ, ಕಬ್ಬು ಹಾಗೂ ಗೋವಿನಜೋಳ ಬೆಳೆಯನ್ನು ಆನೆಗಳು ತುಳಿದು ನಾಶ ಮಾಡಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net