

ಬಾಗಲಕೋಟೆ: ಜನರ ಸಮಸ್ಯೆ ಪರಿಹರಿಸಲು, ಸರ್ಕಾರದ ಯೋಜನೆ ತಲುಪಿಸುವ ಕೆಲಸ ನಮ್ಮದು. ಅಽಕಾರಿಗಳು ಇದರ ಅರ್ಥ ಮಾಡಿಕೊಳ್ಳಬೇಕು. ಅದು ಬಿಟ್ಟು ಸಂಪೂರ್ಣ ಮಾಹಿತಿ ಇಲ್ಲದೇ ಕಾಟಾಚಾರಕ್ಕೆ ಸಭೆ ಬರೋವುದು ಸಹಿಸಲು ಸಾಧ್ಯವಿಲ್ಲ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಅಽಕಾರಿಗಳ ಮೇಲೆ ಗರಂ ಆದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ಬಾಗಲಕೋಟೆ, ಹುನಗುಂದ ತಾಲೂಕು ಪಂಚಾಯಿತಿ ತ್ರÊೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಬಾರದ ಅಽಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಮ್ಮ ವರ್ತನೆ ತಿದ್ದಿಕೊಳ್ಳಬೇಕು. ನಾವೆಲ್ಲ ಜನರ ಸೇವೆ ಮಾಡುವ ನೌಕರರ ಎನ್ನುವ ಕರ್ತವ್ಯ ಇರಬೇಕು ಅಂತ ಚಾಟಿ ಬೀಸಿದರು.
ವಿವಿಧ ಇಲಾಖೆಯ ತಾಲೂಕಾ ಮಟ್ಟದ ಅಽಕಾರಿಗಳು ಸಭೆಗೆ ಬರುವಾಗ ಇಲಾಖೆಗೆ ಸಂಬಂಽಸಿದ ಯೋಜನೆಗಳ ಮಾಹಿತಿ ಇರಬೇಕು. ಕೃಷಿ ಇಲಾಖೆ ಅಽಕಾರಿಗೆ ಬಾಗಲಕೋಟೆ ತಾಲೂಕಾ ವ್ಯಾಪ್ತಿಯಲ್ಲಿ ಆದ ಮಳೆಯ ಬಗ್ಗೆ ಕೇಳಿದಾಗ ಅಂದಾಜು ಮಾಹಿತಿ ನೀಡುತ್ತಿರುವುದು ನೋಡಿದರೇ ತಮಗೆ ಜನರ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ರಾಂಪೂರ, ತಿಮ್ಮಾಪುರ ಭಾಗದಲ್ಲಿ ಮಳೆಯಾಗಿಲ್ಲ. ಬಿತ್ತನೆಯು ಆಗಿಲ್ಲ. ಮಳೆ ಆಗಿದೆ ಅಂತ ವರದಿ ನೀಡಿದರೇ ಬರಗಾಲದ ಪರಿಹಾರವು ರೈತರಿಗೆ ದೊರೆಯುವುದಿಲ್ಲ. ಗ್ರಾಮ ಪಂಚಾಯಿತಿಗೊಂದು ಮಳೆ ಮಾಪನ ಕೇಂದ್ರ ಇದ್ದರು, ಮಳೆ ಮಾಹಿತಿ ನೀಡುತ್ತಿಲ್ಲ ಎಂದರೇ ಏರ್ನರ್ಥ ಅಂತ ಪ್ರಶ್ನೆಗಳ ಸುರಿಮಳೆಗೈದರು. ಉತ್ತರ ನೀಡಲಾಗದೇ ಅಽಕಾರಿಗಳು ತಡಬಡಾಯಿಸಿದರು.
ಹುನಗುಂದ ತಾಲೂಕಿನಲ್ಲಿ ಮಲಪ್ರಭಾ ನದಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಪ್ರತಿವರ್ಷವು ತೀವ್ರ ಸಮಸ್ಯೆ ಕಾಣುತ್ತದೆ. ಈಗಲೇ ಪ್ರವಾಹ ನಿರ್ವಹಣೆಗೆ ಎಲ್ಲ ರೀತಿಯಿಂದ ಸನ್ನದ್ದರಾಗಬೇಕು ಎಂದು ಸೂಚಿಸಿದರು. ಈ ವೇಳೆ ತಹಸೀಲ್ದಾರ ಅಮರೇಶ ಪಮ್ಮಾರ ಪ್ರತಿಕ್ರಿಯೆ ನೀಡಿ, ಗಂಜಿ ಕೇಂದ್ರ, ಪರಿಹಾರ ಕಾರ್ಯ, ಪ್ರವಾಹಕ್ಕೆ ಒಳಗಾದವರನ್ನು ಸ್ಥಳಾಂತರಿಸಲು, ಈಜುಗಾರರು ಹಾಗೂ ಹಾವು ಹಿಡಿಯುವವರನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಪ್ರವಾಹ ನಿರ್ವಹಣೆ ತಂಡ ಸಿದ್ದವಾಗಿರುವುದಾಗಿ ತಿಳಿಸಿದರು. ಅಲ್ಲದೇ ಬಾಗಲಕೋಟೆ ತಾಲೂಕಿನ ೧೦ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ೮ ಗ್ರಾಮಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆಲೂರ ಎಲ್.ಟಿ, ಬುದೇನೂರ ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಲಾಗುತ್ತಿದೆ ಎಂದರು.
ಶಾಸಕ ಎಚ್.ವೈ.ಮೇಟಿ ಮಾತನಾಡಿ, ಉತಾರದಲ್ಲಿ ಇತರೆ ಕಾಲಂದಲ್ಲಿ ಸರ್ಕಾರ, ಸರ್ಕಾರಿ ಅಂತ ನಮೂದಾಗಿವೆ. ಇವುಗಳ ಬಗ್ಗೆ ಗೊಂದಲವಿದೆ. ಸಾಲ ಪಡೆಯಲು ಸಾಧ್ಯವಾಗದೇ ರೈತರು ತೊಂದರೇ ಅನುಭವಿಸುತ್ತಿದ್ದಾರೆ. ರೈತರನ್ನು ಪದೇ ಪದೇ ಕಚೇರಿಗೆ ಅಲೆದಾಟ ಮಾಡದಂತೆ ಉತಾರದಲ್ಲಿ ತಿದ್ದುಪಡಿ ಮಾಡಲು ಸೂಚಿಸಿದರು. ಈ ವೇಳೆ ತಹಸೀಲ್ದಾರ ಅಮರೇಶ ಪಮ್ಮಾರ ಮಾತನಾಡಿ, ಬಾಗಲಕೋಟೆ ತಾಲೂಕು ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ನಡೆಸಲಾಗುವುದು. ಸಂಬಂಧಪಟ್ಟ ರೈತರಿಂದ ಅರ್ಜಿ ಪಡೆದುಕೊಂಡು ಇತ್ಯರ್ಥ ಮಾಡಲಾಗುವುದು. ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗೆ ಸಂಬಂಽಸಿದ ಪ್ರಗತಿ ಪರಿಶೀಲನೆ ಮಾಡಿದ ಶಾಸಕರು ಪ್ರತಿಯೊಂದು ಯೋಜನೆಗಳ ಬಗ್ಗೆ ಜನಪ್ರತಿನಿಽಗಳ ಬಗ್ಗೆ ಮಾಹಿತಿ ನೀಡಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಗಮನಕ್ಕೆ ತರಬೇಕು. ಕೃಷಿ ಯಂತ್ರೋಪಕರಣ ಅರ್ಹ ರೈತರಿಗೆ ವಿತರಣೆಗೆ ಕ್ರಮವಹಿಸಲು ಸೂಚನೆ ನೀಡಿದರು. ಪಶು ಇಲಾಖೆಗೆ ಸಂಬಂಽಸಿದಂತೆ ಹೆಚ್ಚುವರಿ ಪಶು ಆಸ್ಪತ್ರೆಗಳನ್ನು ಸ್ಥಾಪನೆಗೆ ಪ್ರಸ್ತಾವನೆಗಳು ಇದ್ದಲ್ಲಿ ನೀಡುವಂತೆ ಸಭೆಯಲ್ಲಿ ತಿಳಿಸಲಾಯಿತು. ರೇಷ್ಮೆ ಕೃಷಿ ವ್ಯಾಪ್ತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಹುನಗುಂದ ತಾಲೂಕಿನ ಕಮತಗಿ ಭಾಗದಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಯುತ್ತಿದ್ದು, ಅಲ್ಲಿಯ ರೈತರಿಗೆ ಯೋಜನೆಗಳು ದೊರೆಯುವಂತೆ ಮಾಡಿ ಮತ್ತಷ್ಟು ಉತ್ತೇಜನ ನೀಡಲು ತಿಳಿಸಿದರು.
ಕುಡಿಯುವ ನೀರಿಗೆ ಸಂಬಂಽಸಿದಂತೆ ಜಲ ಜೀವನ ಮೀಷನ್‌ದಡಿ ಕೈಗೊಂಡ ಕಾಮಗಾರಿಗಳ ಮಾಹಿತಿ ಪಡೆದರು. ನಂತರ ಲೋಕೋಪಯೋಗಿ, ಶಿಕ್ಷಣ, ಸಮಾಜ ಕಲ್ಯಾಣ, ಶಿಶು ಅಭಿವೃದ್ದಿ ಯೋಜನೆ, ಸಾಮಾಜಿಕ ಅರಣ್ಯ, ನಮ್ಮ ಗ್ರಾಮ ನಮ್ಮ ರಸ್ತೆ, ಸಣ್ಣ ನೀರಾವರಿ, ಅಕ್ಷರ ದಾಸೋಹ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಂಡರು.
ಸಭೆಯಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ, ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆ ಪ್ರಾಽಕಾರದ ಅಧ್ಯಕ್ಷ ಎಸ್.ಎನ್.ರಾಂಪೂರ, ತಾಲೂಕಾ ಪಂಚಾಯಿತಿ ಆಡಳಿತಾಽಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಖ ಲಕ್ಷ÷್ಮಣ ಕಳ್ಳೇನ್ನವರ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ಅಮರೇಶ ಪಮ್ಮಾರ, ಬಾಗಲಕೋಟೆ ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ಸುಭಾಷ ಸಂಪಗಾಂವಿ, ಹುನಗುಂದ ತಾ.ಪಂ ಕಾಂiÀiðನಿರ್ವಾಹಕ ಅಽಕಾರಿ ಎಸ್.ವಿ.ದೇಶಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.