

ಬಾಗಲಕೋಟೆ: ರೈತರು, ಮಠ, ಮಾನ್ಯಗಳ ಪಹಣಿಯಲ್ಲಿ ಹುನ್ನಾರದ ಮೂಲಕ ವಕ್ ಹೆಸರು ಕಾಂಗ್ರೆಸ್ ಸರ್ಕಾರ ನಮೂದಿಸಿದೇ ಎಂದು ಆರೋಪಿಸಿ ಹಾಗೂ ವಕ್ ಬೋರ್ಡ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕವು ವಿವಿಧ ಮಠಾಽÃಶರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಆಂದೋಲನ ಶುಕ್ರವಾರ ನಡೆಸಿತು.
ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮರವಣಿಗೆ ಮೂಲಕ ಜಿಲ್ಲಾಡಳಿತ ಮುಖ್ಯದ್ವಾರಕ್ಕೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತ್ತು. ವಿವಿಧ ಮಠಾಽÃಶರು, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡರು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ದೇಶವನ್ನು ಹಾಳು ಮಾಡುವ ಕೆಲಸ ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ವಕ್ ಬೋರ್ಡ್ಗೆ ತಿದ್ದುಪಡಿ ತರಲಿದ್ದಾರೆಂಬ ಸುದ್ದಿ ಹರಡುತ್ತಿದ್ದಂತೆ ರಾಜ್ಯದ ರೈತರ, ಮಠಮಾನ್ಯ, ದೇವಸ್ಥಾನ, ಸಾರ್ವಜನಿಕ ಆಸ್ತಿಗಳ ಪಹಣಿಯಲ್ಲಿ ವಕ್ ಎಂದು ನಮೂದು ಮಾಡುತ್ತಿದ್ದಾರೆ. ಬಿಲ್ ಪಾಸ್ ಆದರೆ, ವಕ್ ಮಂಡಳಿಗೆ ಆಸ್ತಿಗಳು ಸಿಗುವುದಿಲ್ಲ ಎಂಬ ಹುನ್ನಾರದಿಂದ ಕಾಂಗ್ರೆಸ್ ಸರ್ಕಾರದ ಪ್ರಾಯೋಜಿತ ವಕ್‌ದಿಂದ ನೋಡಿಸ್ ನೀಡುವ ಕೆಲಸವಾಗುತ್ತಿದೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಅಕ್ರಮವಾಗಿ ರೈತರ, ಮಠ-ಮಂದಿರಗಳ ಆಸ್ತಿ ಕಬಳಿಸುತ್ತಿರುವ ವಕ್ ಬೋರ್ಡ್ಗೆ ತಿದ್ದುಪಡಿ ತರದೇ ಬೋರ್ಡ್ನ್ನೇ ರದ್ದುಗೊಳಿಸಬೇಕು. ಒಂದು ಧರ್ಮದವರನ್ನು ಓಲೈಸಲು ಮಾತ್ರ ದೇಶದಲ್ಲಿ ಕಾಂಗ್ರೆಸ್ ಬೋರ್ಡ್ ಆರಂಭಿಸಿತು. ಇದರಿಂದ ಕೇವಲ ಹಿಂದುಗಳಿಗೆ ಅಷ್ಟೇ ಅಲ್ಲ. ಅವರ ಸಮುದಾಯದವರಿಗೂ ತೊಂದರೆಯಾಗುತ್ತಿದೆ. ಎಲ್ಲಿಯವರೆಗೆ ಕಾಂಗ್ರೆಸ್ ಅಽಕಾರದಲ್ಲಿರುತ್ತದ್ದೆಯೋ ಅಲ್ಲಿಯವರೆಗೆ ದೇಶದ್ರೋಹದ ಕೆಲಸಗಳು ನಡೆಯುತ್ತವೆ ಎಂದು ಬೇಸರ ವ್ಯಕ್ತ ಪಡಿಸಿದರು.
ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ, ದೇಶದಲ್ಲಿ ಹಿಂದು ಸಮಾಜದ ಮಠ, ಮಾನ್ಯಗಳು ನಿತ್ಯವು ಸಾವಿರಾರು ಜನರಿಗೆ ಅನ್ನ, ಅಕ್ಷರ, ವಸತಿ ದಾಸೋಹ ನಡೆಸುತ್ತವೆ. ಇಲ್ಲಿ ವರೆಗೆ ಒಂದೇ ಒಂದು ಮಸೀದಿ, ಚರ್ಚೆಗಳಲ್ಲಿ ಇಂತಹ ಕಾರ್ಯ ನಡೆದಿಲ್ಲ. ಬಡವರ ಆಸ್ತಿ, ಹಿಂದು ಸಮಾಜದ ಆಸ್ತಿ ಕಬಳಿಸುವ ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ಗುಡುಗಿದರು.
ಶಾಸಕ ಸಿದ್ದು ಸವದಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ ಸೇರಿದಂತೆ ಇತರರು ಮಾತನಾಡಿದರು. ಕಮತಗಿಯ ಪ್ರಭು ರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಗುರುಸಿದ್ದೇಶ್ವರ ಶ್ರೀಗಳು, ದಿಗಂಬರೇಶ್ವರ ಸ್ವಾಮೀಜಿ, ವಿರುಪಾಕ್ಷ್ಯ ಸ್ವಾಮೀಜಿ, ಮುಖಂಡರಾದ ಬಸವರಾಜ ಯಂಕಂಚಿ, ರಾಜು ನಾಯಕ, ಶಂಕರ ತೇಲಕರ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ, ಕರಬಸಯ್ಯ ಹಿರೇಮಠ, ಅಜಯ ಕಡಪಟ್ಟಿ, ಅರವಿಂದ ಗೌಡರ, ಶ್ರೀಶೈಲ ಬೀಳಗಿ, ಈರಣ್ಣ ಗಿಡ್ಡಪ್ಪಗೋಳ, ನಾಗಪ್ಪ ಅಂಬಿ, ಮುತ್ತಣ್ಣ ಬೆಣ್ಣೂರ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ಸಿ.ಟಿ.ಉಪಾಧ್ಯ, ವಿಜಯಲಕ್ಷಿ÷್ಮÃ ತುಂಗಳ, ಶಶಿಕಲಾ ಮಜ್ಜಗಿ, ಪ್ರಭು ಹಡಗಲಿ ಇತರರಿದ್ದರು.