ಕಾಂಗ್ರೆಸ್ ನವರಿಗೆ ಬೆಳಗ್ಗೆ ಮನಿ, ರಾತ್ರಿ ಹನಿ ಚಿಂತೆ !

bkt-17-1 b
Published on

ಬಾಗಲಕೋಟೆ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಅನಾಚಾರ ನಡೆಯುತ್ತಿದೆ. ಈ ಸರ್ಕಾರಕ್ಕೆ ಕಿವಿ ಕೇಳುತ್ತಿಲ್ಲ. ಚರ್ಮವೂ ದಪ್ಪ ಇದೆ. ಹೀಗಾಗಿ ಇವರಿಗೆ ಕಟ್ಟಿಗೆಯ ಬದಲಿಗೆ ಬಾರಕೋಲ್‌ನಿಂದಲೇ ಹೊಡೆದರೆ ಮಾತ್ರ ಚುರುಕು ಮುಟ್ಟುತ್ತದೆ. ಈ ಕಾಂಗ್ರೆಸ್‌ನವರು ಬೆಳಗ್ಗೆ ಮನಿ ಚಿಂತೆಯಾದರೆ ರಾತ್ರಿ ಹನಿ ಟ್ರ‍್ಯಾಪ್ ಚಿಂತೆಯಲ್ಲಿ ಇದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.

ಬಾಗಲಕೋಟೆ ನಗರದಲ್ಲಿ ಗುರುವಾರ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಮೂರು ಮತ್ತೊಂದು ವಿಷಯಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಜಾತಿಗಣತಿ, ಮಂತ್ರಿಗಳ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆ ಮಾತ್ರ. ಇದನ್ನು ಬಿಟ್ಟರೆ ಬೆಳಗ್ಗೆ ಮನಿ ರಾತ್ರಿ ಹನಿ ಚಿಂತೆಯ ಬಗ್ಗೆ ಚರ್ಚೆ ಆಗುತ್ತಿದೆ ಎಂದರು.

ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ವಿಧಾನಸಭೆ ಕ್ಷೇತ್ರಗಳಕ್ಕೆ ಸಾವಿರ ಸಾವಿರ ಕೋಟಿ ರೂ. ಅನುದಾನ ಕೊಟ್ಟು ಅಭಿವೃದ್ಧಿ ಕೆಲಸಕ್ಕೆ ಒತ್ತು ಕೊಟ್ಟಿತ್ತು. ಆದರೆ, ಈ ಸರ್ಕಾರದಲ್ಲಿ ಅನುದಾನಕ್ಕಾಗಿ ಶಾಸಕರು ಭಿಕ್ಷೆ ಬೇಡುತ್ತಿದ್ದಾರೆ. ಖಜಾನೆ ಖಾಲಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜನರು ಮನೆ ಬಾಗಿಲಿಗೆ ನಾಳೆ ಬಾ ಎಂದು ಎಂದು ಬರೆದಿರುವಂತೆ ಕಾಂಗ್ರೆಸ್ ಶಾಸಕರು ಅನುದಾನ ಕೇಳಿದರೆ ನಾಳೆ ಬಾ ಎನ್ನುವ ಸ್ಥಿತಿ ಇದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗೃಹಮಂತ್ರಿಗಳು ಎಲ್ಲವೂ ಸಾಮಾನ್ಯ, ಸಹಜ ಬಿಡಿ ಎನ್ನುತ್ತಾರೆ. ಅವರ ಇಲಾಖೆಗೆ ಸಂಬAಽಸಿದAತೆ ಸಣ್ಣ ಖರ್ಗೆಯವರು ಹೇಳಿಕೆ ಕೊಡುತ್ತಾರೆ ಎಂದು ಚುಚ್ಚಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಸಿದ್ದರಾಮಯ್ಯ ತಮ್ಮನ್ನು ತಾವು ಆರ್ಥಿಕ ತಜ್ಞ ಎಂದು ಹೇಳಿಕೊಳ್ಳುತ್ತಾರೆ. ಸುಳ್ಳು ಆಶ್ವಾಸನೆ ಕೊಟ್ಟು ಅಽಕಾರ ಪಡೆದು ಜನರ ಬೇಡಿಕೆ ಈಡೇರಿಸಿಲ್ಲ. ರಾಮಕೃಷ್ಣ ಹೆಗಡೆ ಅವರ ಗರಡಿಯಿಂದ ರಾಜಕಾರಣಕ್ಕೆ ಬಂದವರು. ಅವರಿಗೆ ನಿಜವಾಗಿಯೂ ನೈತಿಕತೆ ಇದ್ದಿದ್ದರೆ ಮುಡಾ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಾಗಿತ್ತು. ಆದರೆ, ಅಽಕಾರ ಉಳಿಸಿಕೊಳ್ಳಲು ಕೋರ್ಟ್ಗೆ ಅಲೆದಾಡುತ್ತಿದ್ದಾರೆ ಎಂದು ಛೇಡಿಸಿದರು.

ಸಿದ್ದರಾಮಯ್ಯ ಅವರೊಂದಿಗೆ ನಾನು ರಾಜಕಾರಣ ಆರಂಭಿಸಿದ್ದು, ಹತ್ತಿರದಿಂದ ಅವರ ಏನು ಎನ್ನುವುದು ನನಗೆ ಗೊತ್ತಿದೆ. ಎಸ್ಸಿಪಿ, ಟಿಎಸ್ಪಿ ನಿಯಮಗಳನ್ನು ಗಾಳಿಗೆ ತೂರಿ ಹಣ ದುರ್ಭಳಿಕೆ ಮಾಡಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್‌ನವರು ಈ ಅನ್ಯಾಯವನ್ನು ಸಹಿಸಿಕೊಂಡು ಅಽಕಾರದ ಲಾಲಾಸೆಯಿಂದ ಸಿದ್ದರಾಮಯ್ಯ ಅವರಿಗೆ ಸಾತ್ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಅಽಕಾರಕ್ಕಾಗಿ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಜಾತಿಗಣತಿ ಬೇಡ ಎನ್ನುವ ಜನರ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಽಕಾರ ಉಳಿಸಿಕೊಳ್ಳಲು ಈ ಬೆಂಕಿ ಹಚ್ಚುವ ಕೆಲಸ ಬಿಡಬೇಕು.

ಅಽಕಾರ ಶಾಶ್ವತವಲ್ಲ. ಜನರ ಭಾತೃತ್ವದ ಬದುಕಿಗೆ ದಕ್ಕೆ ತರವ ಕೆಲಸ ಮಾಡಬಾರದು ಎಂದು ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ವಕ್ ಕಾಯ್ದೆ ತಿದ್ದುಪಡಿ ಬಗ್ಗೆ ಕಾಂಗ್ರೆಸ್‌ನವರು ಮುಸ್ಲಿಂರಿಗೆ ತಪ್ಪು ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮುಸಲ್ಮಾನ ಸಮಾಜದಲ್ಲಿ ದಲಿತರು, ಬಡವರು ಇದ್ದಾರೆ. ವಿವಿಧ ಕಾಯಕ ಮಾಡುವ ಜನರು ಇದ್ದಾರೆ. ಆ ಜನರ ಕಲ್ಯಾಣಕ್ಕಾಗಿ ವಕ್ ಆಸ್ತಿ ಉಪಯೋಗ ಆಗಬೇಕು, ಆ ಜನರ ಕಲ್ಯಾಣಕ್ಕೆ ವಕ್ ಉತ್ಪನ್ನ ಕೊಡಬೇಕು ಎಂದು ನರೇಂದ್ರ ಮೋದಿ ಅವರು ವಕ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದಾರೆ. ಮುಸಲ್ಮಾನರಲ್ಲಿ ಅತ್ಯಂತ ಕೆಳಜಾತಿಯಲ್ಲಿ ಇರುವ ಜನರಿಗಾಗಿ ಈ ಕಾಯ್ದೆ ತಂದಿದ್ದಾರೆ. ಇದನ್ನು ಮುಸ್ಲಿಂರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ಅವರು ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಜಾತಿ ಜಾತಿ ನಡುವೆ ಕಂದಕ ಉಂಟು ಮಾಡಿದ್ದಾರೆ. ರಾಜ್ಯದಲ್ಲಿ ಲಿಂಗಾಯತರನ್ನು ಕಡಿಮೆ ಸಂಖ್ಯೆಯಲ್ಲಿ ತೋರಿಸಲೆಂದು ಉಪಜಾತಿ ಮಾಡಿ ಒಡೆದು ಹಾಕಿದರು. ಗಾಣಗರು ಬೇರೆ, ಪಂಚಮಸಾಲಿ, ಬಣಜಿಗ, ರೆಡ್ಡಿಗಳು ಬೇರೆ ಎಂದು ಹೀಗೆ ೫೬ ಜಾತಿಗಳನ್ನು ವಿಂಗಡನೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರ ಇರದೇ ಇದ್ದಿದ್ದರೆ ಪರಿಶಿಷ್ಟ ಜಾತಿಗೆ ಮೀಸಲಾತಿ ಶೇ.೧೫ ರಿಂದ ೧೭ಕ್ಕೆ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. ೩ ರಿಂದ ೭ಕ್ಕೆ ಏರಿಕೆ ಆಗುತ್ತಿರಲಿಲ್ಲ. ಆದರೆ, ಅವರ ಮೋಸದ ಮಾತಿಗೆ ಮರಳಾಗಿ ಬಿಜೆಪಿಗೆ ಓಟು ಹಾಕದೇ ಅನ್ಯಾಯ ಮಾಡಿದ್ದೀರಿ. ರಾಹುಲ್ ಗಾಂಽ ಹೇಳುತ್ತಾರೆ, ಸಂವಿಧಾನ ಸ್ವಾತಂತ್ರ‍್ಯ ಬಳಿಕ ಬರೆದಿದ್ದಲ್ಲ ಸಾವಿರಾರು ವರ್ಷಗಳ ಹಿಂದೆಯೇ ಸಂವಿಧಾನ ಬರೆಯಲಾಗಿತ್ತು ಎಂದು. ಆವಾಗ ಇವರಪ್ಪ ಅಥವಾ ಅಜ್ಜ ಬಂದು ಬರೆದಿದ್ದರಾ? ಸಿದ್ದರಾಮಯ್ಯ ಅವರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ ಅಲ್ಲ, ವೀರ ಸಾವರ್ಕರ್ ಎನ್ನುತ್ತಾರೆ. ೫೦ ವರ್ಷ ರಾಜಕೀಯ ಮಾಡಿದ್ದೀರಿ, ನಾನು ಲಾಯರ್ ಎನ್ನುತ್ತಾರೆ. ಆದರೆ, ಸಿದ್ದರಾಮಯ್ಯ ಅವರನ್ನು ನಾನು ಸಂಡೆ ಲಾಯರ್ ಎಂದು ಹೇಳುತ್ತೇನೆ. ಆ ಚೋಟಾ ಖರ್ಗೆ ಕೊಟ್ಟ ಚೀಟಿ ಸರಿಯಾಗಿ ಓದದೇ ಏನೇನೋ ಹೇಳಿದ್ದಾರೆ ಎಂದು ಕಿಡಿಕಾರಿದರು.

ಜಾತಿಗಣತಿಯಲ್ಲಿ ಮುಸ್ಲಿಂರನ್ನು ನಂಬರ್ ಒನ್ ಎಂದು ತೋರಿಸಿದ್ದಾರೆ. ಇದು ಮುಸ್ಲಿಂರು ಖುಷಿ ಪಡುವ ಸಂಗತಿ ಅಲ್ಲ. ಇದು ಅಪಾಯಕಾರಿ. ನೀವು ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ನಿಮಗೆ ರಕ್ಷಣೆ, ವಿವಿಧ ಸೌಲಭ್ಯ ಸಿಗುತ್ತಿದ್ದವು. ಈಗ ನಿಮ್ಮನ್ನು ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತರು ಎಂದು ಹೇಳಿದೆ. ಇದರಿಂದ ಇನ್ನು ಮುಂದೆ ನಿಮಗೆ ರಕ್ಷಣೆ ಕೊಡುವವರು ಯಾರು? ಸೌಲಭ್ಯ ಹೆಚ್ಚು ಸಿಗಲ್ಲ. ಸಿದ್ದರಾಮಯ್ಯ ಸರ್ಕಾರ ಮುಸ್ಲಿಂರ ಗೌರವ ಕಳೆಯುವ ಕೆಲಸ ಮಾಡುತ್ತಿದೆ. ಇದನ್ನು ಮುಸ್ಲಿಂರು ಅರ್ಥ ಮಾಡಿಕೊಂಡು ಬಿಜೆಪಿಗೆ ಬನ್ನಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿ.ಪ ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ, ಎನ್.ರವಿಕುಮಾರ, ಶಾಸಕರಾದ ಜಗದೀಶ ಗುಡಗುಂಟಿ, ಹರೀಶ ಪೂಂಜಾ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಎ.ಎಸ್.ಪಾಟೀಲ ನಡಹಳ್ಳಿ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಶ್ರೀಕಾಂತ ಕುಲಕರ್ಣಿ, ಪಿ.ರಾಜೀವ, ಎಂ.ಕೆ.ಪಟ್ಟಣಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net