ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

bkt-20-4
ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಸಂಜೀವ ವಾಡ್ಕರ, ಬಸವರಾಜ ಹೊನ್ನಾಳ್ಳಿ, ವಿಜಯ ಮುಳ್ಳೂರ, ಸಂದೀಪ ಬೆಳಗಲ್ಲ, ಶಂಕರ ನಾಯಕ, ಸಂದೀಪ ಬೆಳಗಲ್ಲ, ಶಿವಾನಂದ ಮಲ್ಲಾಪುರ, ಅಜಯ ಕಪಾಟೆ, ಪ್ರಶಾಂತ ಹೂಗಾರ, ಮಲ್ಲಿಕಾರ್ಜುನ ಕಲ್ಯಾಣಿ ಇತರರು ಇದ್ದರು.
Published on

ಬಾಗಲಕೋಟೆ: ರಾಜ್ಯದಲ್ಲಿ ಬಹುತೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ.ಶಿವಕುಮಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಕಾಂಗ್ರೆಸ್ ಪರ ಜಯ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಂಜೀವ ವಾಡ್ಕರ ಮಾತನಾಡಿ, ನಾಡಿನ ಅಭಿವೃದ್ಧಿಗೆ ಮತದಾರರು ಕಾಂಗ್ರೆಸ್ ಬೆಂಬಲಿಸಿರುವುದು ಸಂತೋಷ ತಂದಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ ಸುಭದ್ರ ಸರ್ಕಾರ ಈ ಅವಧಿಯಲ್ಲಿಯೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಜೋಡೆತ್ತು ಸಹಭಾಗಿತ್ವದಲ್ಲಿ ಆಡಳಿತ ನೀಡಲಿದೆ. ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ಹಿತಕಾಯುವಲ್ಲಿ ಹಿಂಜರಿಯುವದಿಲ್ಲ ಎಂದರು.

ಮುಖಂಡ ಬಸವರಾಜ ಹೊನ್ನಾಳ್ಳಿ ಮಾತನಾಡಿ, ನಾಡಿನ ಜನ ಆಶಯದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸಂತೋಷ ಉಂಟು ಮಾಡಿದೆ. ಮೊದಲ ಕ್ಯಾಬಿನಟನಲ್ಲಿ ಸರ್ಕಾರದ ಐದು ಗ್ಯಾರಂಟಿಗಳು ಜಾರಿಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಸರ್ಕಾರ ಅಂತ ಬಣ್ಣಿಸಿದರು.

ಈ ವೇಳೆ ವಿಜಯ ಮುಳ್ಳೂರ, ಸಂದೀಪ ಬೆಳಗಲ್ಲ, ಶಂಕರ ನಾಯಕ, ಸಂದೀಪ ಬೆಳಗಲ್ಲ, ಶಿವಾನಂದ ಮಲ್ಲಾಪುರ, ಅಜಯ ಕಪಾಟೆ, ಪ್ರಶಾಂತ ಹೂಗಾರ, ಮಲ್ಲಿಕಾರ್ಜುನ ಕಲ್ಯಾಣಿ, ಕೇಶವ ಕುಲಕರ್ಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net